Connect with us

    BANTWAL

    ಬಂಟ್ವಾಳ – ದ್ವಿಚಕ್ರ ವಾಹನಕ್ಕೆ ಜೀಪ್ ಡಿಕ್ಕಿ – ಸ್ಕೂಟರ್ ಸವಾರ ಸಾವು

    ಬಂಟ್ವಾಳ ಸೆಪ್ಟೆಂಬರ್ 3: ಸ್ಕೂಟರ್ ಮತ್ತು ಜೀಪ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ತಾಲೂಕಿನ ನಾವೂರದಲ್ಲಿ ನಡೆದಿದೆ‌.

    ಮೃತರನ್ನು ನಾವೂರ ನಿವಾಸಿ ಅಬ್ಬಾಸ್ (60) ಎಂದು ಗುರುತಿಸಲಾಗಿದೆ. ಬಂಟ್ವಾಳ ತಾಲೂಕಿನ ಮಣಿಹಳ್ಳ ಸಮೀಪದ ನಾವೂರ ಮಸೀದಿ ಎದುರಿನಲ್ಲಿ ಈ ಅಪಘಾತ ಸಂಭವಿಸಿದ್ದು. ಜೀಪ್ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರನಿಗೆ ಗಂಭೀರ ಸ್ವರೂಪದ ಗಾಯವುಂಟಾಗಿತ್ತು. ಕೂಡಲೇ ಅಬ್ಬಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ. ರಾಜೇಶ್ ಅವರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

     

    Share Information
    Advertisement
    Click to comment

    You must be logged in to post a comment Login

    Leave a Reply