Connect with us

LATEST NEWS

ತಲ್ಲೂರಿನಲ್ಲಿ ಭೀಕರ ಅಪಘಾತ: ದ್ವಿಚಕ್ರ ಸವಾರ ಸಾವು

ಕುಂದಾಪುರ ಸೆಪ್ಟೆಂಬರ್ 3: ಮೀನಿನ ಲಾರಿಯೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಕುಂದಾಪುರದ ತಲ್ಲೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.


ಮೃತಪಟ್ಟವರನ್ನು ತಲ್ಲೂರಿನ ನಿವಾಸಿ ಸೀತಾರಾಮ ಶೆಟ್ಟಿ (55) ಎಂದು ಗುರುತಿಸಲಾಗಿದೆ. ಬೈಂದೂರು ಕಡೆಯಿಂದ ಬರುತ್ತಿದ್ದ ಪಿಕ್ ಅಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಇರುವ ಡಿವೈಡರ್ ಮೇಲೆರಿದೆ, ಇದೇ ವೇಳೆ ತಲ್ಲೂರು ಕಡೆಗೆ ಹೋಗುತ್ತಿದ್ದ ಸೀತಾರಾಮ್ ತನ್ನ ಸ್ಕೂಟರ್ ನ ವೇಗವನ್ನು ಕಡಿಮೆಗೊಳಿಸಿದರು.

ಆಗ ಹಿಂಬಂದಿಯಿಂದ ಬಂದ ಮೀನಿನ ಲಾರಿ ಸ್ಕೂಟರ್‌ ಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಸೀತಾರಾಮ ಶೆಟ್ಟಿಯವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲು‌ ಪ್ರಯತ್ನಿಸಲಾಗಿತ್ತಾದರೂ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Facebook Comments

comments