LATEST NEWS
ಕಂಠಪೂರ್ತಿ ಕುಡಿದು ಹೊಸಮಠ ಹೊಳೆಗ ಹಾರಿದ ವಿಜ್ಞಾನಿ
ಪುತ್ತೂರು ಸೆಪ್ಟೆಂಬರ್ 30: ಕಂಠ ಪೂರ್ತಿ ಕುಡಿದು ವಿಜ್ಞಾನಿಯೊಬ್ಬ ತಾಲೂಕಿನ ಹೊಸಮಠ ಹೊಳೆಗೆ ಹಾರಿದ ಘಟನೆ ಇಂದು ಸಂಜೆ ನಡೆದಿದೆ. ನದಿಗೆ ಹಾರಿದ ವಿಜ್ಞಾನಿ ಕಡಬದ ರಬ್ಬರ್ ಸಂಶೋಧನಾ ಕೇಂದ್ರದ ವಿಜ್ಞಾನಿ ತಮಿಳುನಾಡು ಮೂಲದ ರವಿಚಂದ್ರ ಎಂದು ಗುರುತಿಸಲಾಗಿದೆ. ನದಿಗೆ ಹಾರಿದ ವಿಜ್ಞಾನಿಯನ್ನು ಸಾರ್ವಜನಿಕರು ಮತ್ತು ಕಡಬ ಪೊಲೀಸರು ನೀರಿನಿಂದ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ.
ಇಲ್ಲಿನ ಹೊಸಮಠ ಸೇತುವೆ ಬಳಿ ಬೈಕ್ ನಲ್ಲಿ ಆಗಮಿಸಿದ್ದ ರವಿಚಂದ್ರ ಎಂಬ ತಮಿಳುನಾಡು ಮೂಲದ ವಿಜ್ಞಾನಿ ಕಂಠಪೂರ್ತಿ ಕುಡಿದು ನದಿಗೆ ಹಾರಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಮತ್ತು ಇಬ್ಬರು ಮೆಸ್ಕಾಂ ಸಿಬ್ಬಂದಿ ರಕ್ಷಣೆಗೆ ಮುಂದಾಗಿದ್ದಾರೆ.ಈ ನಡುವೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಕಡಬ ಎಸ್ಐ ರುಕ್ಮ ನಾಯ್ಕ್ ಮತ್ತು ಎಎಸ್ಐ ಸುರೇಶ್, ಸಿಬ್ಬಂದಿ ಕನಕರಾಜ್ ಸೇರಿ ವಿಜ್ಞಾನಿಯನ್ನು ಹೊಳೆಯಿಂದ ಮೇಲೆಕ್ಕೆತ್ತಿ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನದಿಯಿಂದ ಮೇಲಕ್ಕೆ ಎತ್ತಿದ ತಕ್ಷಣ ವಿಜ್ಞಾನಿ ಸ್ಥಳದಲ್ಲಿ ದೊಡ್ಡ ರಾದ್ದಾಂತವನ್ನೇ ಮಾಡಿದ್ದು, ಕೊನೆಗೆ ಕೈಕಾಲು ಕಟ್ಟಿ ಆಸ್ಪತ್ರೆಗೆ ತರಲಾಯಿತು. ಸದ್ಯ ಈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂಬ ಮಾಹಿತಿ ಲಭಿಸಿದೆ.ಇನ್ನೂ ತಕ್ಷಣ ಸ್ಪಂದಿಸಿ ಜೀವರಕ್ಷಕರಾದ ಕಡಬ ಪೋಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
Facebook Comments
You may like
-
ಅನುಮತಿ ಇಲ್ಲದೆ ಡ್ರೋನ್ ಬಳಸಿದರೆ ಕಠಿಣ ಕ್ರಮ – ಪೊಲೀಸ್ ಆಯುಕ್ತರ ಎಚ್ಚರಿಕೆ
-
ಸಹಾಯದ ನೆಪದಲ್ಲಿ ಮದ್ಯವಯಸ್ಸಿನ ಮಹಿಳೆ ಹಾಗೂ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನ..ಎಸ್ ಡಿಪಿಐ ಮುಖಂಡನ ಮೇಲೆ ಪೋಕ್ಸೋ ಪ್ರಕರಣ ದಾಖಲು
-
ಪುತ್ತೂರು ಅಕ್ರಮ ಗಾಂಜಾ ಸಾಗಾಟಕ್ಕೆ ಯತ್ನ – 40 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆದ ಪೊಲೀಸರು
-
ಕುಂಬಳೆ ಮೂಲದ ಯುವಕನಿಗೆ ಹನಿಟ್ರ್ಯಾಪ್ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಪೊಲೀಸ್ ವಶಕ್ಕೆ
-
13 ವರ್ಷ ಬಾಲಕಿ ಮೇಲೆ 48 ಗಂಟೆಗಳಲ್ಲಿ 9 ಕಾಮುಕರಿಂದ 13 ಬಾರಿ ರೇಪ್
-
ನಕಲಿ ಪತ್ರಕರ್ತರಿಗೆ ಉಡುಪಿಯಲ್ಲಿ ಬಿತ್ತು ಧರ್ಮದೇಟು
You must be logged in to post a comment Login