Connect with us

    BANTWAL

    ಶಾಲಾಮಕ್ಕಳನ್ನು ಕರೆದೊಯ್ಯುವ ವೇಳೆ ರಿಕ್ಷಾ ಡ್ರೈವರ್ ಗೆ ಹೃದಯಾಘಾತ

    ವಿಟ್ಲ ನವೆಂಬರ್ 09: ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋರಿಕ್ಷಾ ಚಾಲಕರೋರ್ವರು ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಮಾಣಿ ಎಂಬಲ್ಲಿ ನಡೆದಿದೆ. ಕಲ್ಲಡ್ಕ ಕುದ್ರೆಬೆಟ್ಟು ನಿವಾಸಿ ಜಯಕರ ಪೂಜಾರಿ (45) ಹೃದಯಾಘಾತದಿಂದ ಮೃತಪಟ್ಟ ರಿಕ್ಷಾ ಚಾಲಕರಾಗಿದ್ದಾರೆ.


    ಜಯಕರ ಪೂಜಾರಿ ಆಟೋ ರಿಕ್ಷಾ ಚಾಲಕರಾಗಿದ್ದು, ಪ್ರತಿದಿನ ಬೆಳಗ್ಗೆ ಕೆಲ ಮಕ್ಕಳನ್ನು ಶಾಲೆಗೆ ಬಿಡುತ್ತಿದ್ದರು. ಎಂದಿನಂತೆ ಇಂದು ಮಕ್ಕಳನ್ನು ಆಟೋ ರಿಕ್ಷಾದಲ್ಲಿ ಶಾಲೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಮಕ್ಕಳು ಜೆರಾಕ್ಸ್ ಶಾಪ್ ಹತ್ತಿರ ಆಟೋ ನಿಲ್ಲಿಸಲು ಸೂಚಿಸಿದ್ದು, ಈ ವೇಳೆ ಆಟೋ ರಿಕ್ಷಾ ನಿಲ್ಲಿಸಿದ್ದು, ಮಕ್ಕಳು ಜೆರಾಕ್ಸ್ ತೆಗೆದು ಹಿಂದಿರುಗಿದ ವೇಳೆ ಅವರು ಕುಸಿದು ಬಿದ್ದಿದ್ದರು ಎನ್ನಲಾಗಿದೆ. ತಕ್ಷಣ ಅವರನ್ನು ಹತ್ತಿರದ ಕ್ಲಿನಿಕ್‌ಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply