Connect with us

    LATEST NEWS

    ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಕ್ಟೋಬರ್ 15 ರಿಂದ ಹಂತ ಹಂತವಾಗಿ ಶಾಲಾ ಕಾಲೇಜು ಕಾರ್ಯಾರಂಭ

    ಮಂಗಳೂರು ಅಕ್ಟೋಬರ್ 05 :ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಕ್ಟೋಬರ್ 15 ರ ನಂತರ ಹಂತಹಂತವಾಗಿ ಶಾಲೆಗಳು, ಕಾಲೇಜುಗಳ, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಕಾರ್ಯಾರಂಭಿಸಬಹುದಾಗಿದ್ದು, ಸಂಬಂಧಪಟ್ಟ ಶಾಲೆಯ ಸಂಸ್ಥೆಯ ಆಡಳಿತ ಮಂಡಳಿಯೊಂದಿಗೆ ಸಮಾಲೋಚಿಸಿ ಪರಿಸ್ಥಿತಿಯ ನಿರ್ಧರಣೆಯ ಆಧಾರದ ಮೇಲೆ ಮತ್ತು ಈ ಕೆಳಕಂಡ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.


    ಆನ್ ಲೈನ್ – ದೂರಶಿಕ್ಷಣ ಕಲಿಕೆಗಳಿಗೆ ಆದ್ಯತಾನುಸಾರ ಅನುಮತಿ ಮುಂದುವರಿಸಬೇಕು. ಶಾಲೆಗಳು ಆನ್ ಲೈನ್ ತರಗತಿಗಳನ್ನು ನಡೆಸುತ್ತಿದ್ದು, ಕೆಲವು ವಿದ್ಯಾರ್ಥಿಗಳು ಖುದ್ದಾಗಿ ಶಾಲೆಗೆ ಹಾಜರಾಗುವುದಕ್ಕೆ ಬದಲಾಗಿ ಆನ್ ಲೈನ್ ತರಗತಿಗಳಿಗೆ ಹಾಜರಾಗಲು ಆಯ್ಕೆ ಮಾಡಿಕೊಂಡಲ್ಲಿ, ಹಾಗೆ ಮಾಡಲು ಅವರಿಗೆ ಅನುಮತಿ ನೀಡಬೇಕು.

    ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿ ಮತ್ತು ಪೋಷಕರ ಲಿಖಿತ ಅನುಮತಿಯೊಂದಿಗೆ ಮಾತ್ರವೇ ಶಾಲೆಗಳಿಗೆ /ಸಂಸ್ಥೆಗಳಿಗೆ ಹಾಜರಾಗಬಹುದಾಗಿದ್ದು. ಯಾವುದೇ ಕಾರಣಕ್ಕೂ ಹಾಜರಾತಿಯನ್ನು ಕಡ್ಡಾಯಗೊಳಿಸಬಾರದು ಮತ್ತು ಅದು ಸಂಪೂರ್ಣವಾಗಿ ಪೋಷಕರ ಅನುಮತಿಯ ಮೇಲೆ ಅವಲಂಬಿತವಾಗಿರಬೇಕು ಎಂದು ತಿಳಿಸಿದ್ದಾರೆ.
    ಕ್ರೀಡಾಪಟುಗಳ ತರಬೇತಿಗಾಗಿ ಬಳಸುತ್ತಿರುವ ಈಜುಕೊಳಗಳನ್ನು ಪ್ರಸಕ್ತ ಸಾಲಿನ ಅಕ್ಟೋಬರ್ 15 ರಿಂದ ಜಾರಿಗೆ ಬರುವಂತೆ ತೆರೆಯಲು ಅನುಮತಿ ನಿಡಲಾಗುವುದು.

    Share Information
    Advertisement
    Click to comment

    You must be logged in to post a comment Login

    Leave a Reply