ಬ್ರೇಕಿಂಗ್ ನ್ಯೂಸ್ – SCDCC ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ದೊಡ್ಡ ಭ್ರಷ್ಟಾಚಾರಿ- ಹಿರಿಯ ಕಾಂಗ್ರೇಸ್ ಮುಖಂಡ ಜನಾರ್ಧನ ಪೂಜಾರಿ

ಮಂಗಳೂರು ಮಾರ್ಚ್ 14: ಇಡಿ ಸಹಕಾರಿ ರಂಗವೇ ಬೆಚ್ಚಿಬಿಳಿಸುವ ಸುದ್ದಿ ಈಗ ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ. ಎಂ. ಎನ್‌. ರಾಜೇಂದ್ರ ಕುಮಾರ್‌ ಅವರು ಬಡವರ ಹಣವನ್ನು ನುಂಗಿದ್ದು ಅವರೊಬ್ಬ ಭ್ರಷ್ಟಾಚಾರಿ ಎಂದು ಕಾಂಗ್ರೇಸ್ ಹಿರಿಯ ಮುಖಂಡ ಬಿ.ಜನಾರ್ಧನ ಪೂಜಾರಿ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ನಿಂದ ಎಸ್ ಸಿ ಡಿಸಿಸಿ ಅಧ್ಯಕ್ಷ ರಾಜೇಂದ್ರ ಕುಮಾರ್ ಅವರ ಹೆಸರು ಕೇಳಿ ಬಂದಿರುವ ಹಿನ್ನಲೆಯಲ್ಲಿ ಗರಂ ಆದ ಜನಾರ್ಧನ ಪೂಜಾರಿ ಕಾಂಗ್ರೆಸ್ ನಿಂದ ಯಾವುದೇ ಕಾರಣಕ್ಕೂ ರಾಜೇಂದ್ರ ಕುಮಾರ್ ಗೆ ಟಿಕೆಟ್ ನೀಡಬಾರದು, SCDCC ಬ್ಯಾಂಕ್ ಅಧ್ಯಕ್ಷರಾಗಿರುವ ರಾಜೇಂದ್ರ ಕುಮಾರ್ ಮೇಲೆ ಭೃಷ್ಟಾಚಾರ ದ ಮೇಲೆ ಆರೋಪ ಇದ್ದು, ಅವರು ಬಡವರ ಹಣವನ್ನು ರಾಜೇಂದ್ರ ಕುಮಾರ್ ನುಂಗಿದ್ದಾರೆ ಎಂದು ಆರೋಪಿಸಿದರು.

ರಾಜೇಂದ್ರ ಕುಮಾರ್ ಅವರು ಒಬ್ಬ ಭ್ರಷ್ಟಾಚಾರಿಯಾಗಿದ್ದು ಅವರ ಮೇಲೆ ವಿರುದ್ದ ಭ್ರಷ್ಟಾಚಾರದ ಆರೋಪಗಳು ಮಾಧ್ಯಮಗಳಲ್ಲಿ ಬಂದಿದೆ ಎಂದು ಹೇಳಿದ ಅವರು ರಾಜೇಂದ್ರ ಕುಮಾರ್ ಮೇಲೆ ವಾಗ್ದಾಳಿ ನಡೆಸಿದರು.

ಒಂದು ವೇಳೆ ಕಾಂಗ್ರೇಸ್ ರಾಜೇಂದ್ರ ಕುಮಾರ್ ಗೆ ಲೋಕಸಭಾ ಟಿಕೆಟ್ ನೀಡಿದರೆ ನಾನು ಬಂಡಾಯ ನಿಲ್ಲುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.

VIDEO

Facebook Comments

comments