Connect with us

    DAKSHINA KANNADA

    ಸೌದಿ ಅರೇಬಿಯಾ : ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಂಗಳೂರು ಮೂಲದ ನಾಲ್ವರ ಅಂತ್ಯಕ್ರೀಯೆ ಸೌದಿಯಲ್ಲೇ ಮಾಡಲು ನಿರ್ಧಾರ..!

    ಮಂಗಳೂರು : ಸೌದಿ ಅರೇಬಿಯಾದ ನಡೆದ ಭೀಕರ ಕಾರು ಅಪಘಾತದಲ್ಲಿ ಮಡಿದ ಮಂಗಳೂರು ಮೂಲದ ನಾಲ್ವರ ಅಂತ್ಯ ಸಂಸ್ಕಾರ ಸೌದಿಯಲ್ಲೇ ಮಾಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ.

    ಅಪಘಾತದಲ್ಲಿ ಮೃತಪಟ್ಟಿರುವ ಹಿಬಾ, ಆಕೆಯ ಪತಿ ಮತ್ತು ಮಕ್ಕಳ ಅಂತ್ಯ ಸಂಸ್ಕಾರ ಸೌದಿ ಅರೇಬಿಯಾದಲ್ಲೇ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಅವರ ಕುಟುಂಬದ ಸದಸ್ಯರು ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದು ಬಂದಿದೆ.

    ಕತಾರ್‌ನಿಂದ ಸೌದಿ ಅರೇಬಿಯಕ್ಕೆ ಉಮ್ರಾ ನಿರ್ವಹಿಸಲು ಕಾರಿನಲ್ಲಿ ಮಗುವಿನೊಂದಿಗೆ ದಂಪತಿ ತೆರಳುತ್ತಿದ್ದಾಗ ಗುರುವಾರ ಮುಂಜಾನೆ ಸುಮಾರು ನಾಲ್ಕು ಗಂಟೆ ಹೊತ್ತಿಗೆ ಈ ದುರ್ಘಟನೆ ಸಂಭವಿಸಿತ್ತು ಎನ್ನಲಾಗಿದೆ.

    ಹಳೆಯಂಗಡಿ ತೋಕೂರು ನಿವಾಸಿ ಶಮೀಮ್‌ ಮತ್ತು ಝರೀನಾ ದಂಪತಿಯ ಪುತ್ರಿ ಹಿಬಾ ( 29) ಆಕೆಯ ಪತಿ ಮುಹಮ್ಮದ್‌ ರಮೀಝ್‌ (34) ಮಕ್ಕಳಾದ ಆರೂಶ್‌ (3) ಮತ್ತು ರಾಹ ( 3 ತಿಂಗಳು)  ಮೃತ ದುರ್ದೈವಿಗಳು. ಅದೇ ಕಾರಿನಲ್ಲಿದ್ದ ಹಿಬಾ ಅವರ ಸಹೋದರಿ ಶಬ್ನಮ್‌ ಎಂಬವರ ಮಗಳು ಫಾತಿಮಾ (19) ಗಂಭೀಯ ಗಾಯಗೊಂಡಿದ್ದು, ಆಕೆಯನ್ನು ರಿಯಾದ್‌ ನ ಆಸ್ಪತ್ರೆಯಲ್ಲಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಪೈಕಿ ಅಪಘಾತಕ್ಕೀಡಾಗಿದ್ದ ಕಾರಿನಲ್ಲಿದ್ದ ಹಿಬಾ ಅವರ ಇನ್ನೋರ್ವ ಸಹೋದರಿ ಲುಬ್ನಾ ಅವರ ಮಗ ಈಸ (4) ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾನೆ ಎಂದು ಕುಟುಂಬಸ್ಥರು ಸದಸ್ಯರು ಮಾಹಿತಿ ನೀಡಿದ್ದಾರೆ. ಮೃತ ಹಿಬಾ ಅವರ ತಂದೆ ಶಮೀಮ್‌ ತಾಯಿ ಝರೀನ ಮತ್ತು ಮೊಮ್ಮಕ್ಕಳು ಒಂದು ಕಾರಿನಲ್ಲಿ ಮತ್ತು ಹಿಬಾ ತನ್ನ ಕುಟುಂಬದೊಂದಿಗೆ ಇನ್ನೊಂದು ಕಾರಿನಲ್ಲಿ ಮಂಗಳವಾರ ಫಜರ್‌ ನಮಾಝ್‌ ಮುಗಿಸಿಕೊಂಡು ಉಮ್ರಾ ಯಾತ್ರೆ ಆರಂಭಿಸಿದ್ದರು.

    ಮಂಗಳವಾರ ರಾತ್ರಿ ರಿಯಾದ್‌ ತಲುಪಿದ್ದ ಅವರು ಅಲ್ಲೇ ತನ್ನ ಕುಟುಂಸ್ಥರ ಮನೆಯಲ್ಲಿ ಉಳಿದುಕೊಂಡು ಬುಧವಾರ ಬೆಳಗ್ಗೆ ರಿಯಾದ್‌ ನಿಂದ ಮತ್ತೆ ಉಮ್ರಾ ಯಾತ್ರೆ ಆರಂಭಿಸಿದ್ದರು. ರಮೀಝ್‌ ತನ್ನ ಪತ್ನಿ ಹಿಬಾ, ಮಕ್ಕಳಾದ ಆರೂಶ್‌, ರಾಹ ಮತ್ತು ಹಿಬಾ ಅವರ ಸಹೋದರಿಯರ ಮಕ್ಕಳಾದ ಫಾತಿಮಾ ಮತ್ತು ಈಸ ಜೊತೆ ಒಂದು ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಇನ್ನೊಂದು ಕಾರಿನಲ್ಲಿ ಹಿಬಾ ಅವರ ತಂದೆ ಶಮೀಮ್‌, ತಾಯಿ ಝರೀನಾ ಮೊದಲಾದವರು ಪ್ರಯಾಣಿಸುತ್ತಿದ್ದರು. ರಮೀಝ್‌ ಅವರು ಚಲಾಯಿಸುತ್ತಿದ್ದ ಕಾರು ರಿಯಾದ್ ನಿಂದ ತಾಯೀಫ್ ಗೆ ಹೋಗುವ ಮಾರ್ಗ ಮಧ್ಯದ ಸುಮಾರು 250 ಕಿ.ಮೀ. ದೂರದದಲ್ಲಿರುವ ಝುಲ್ಫಾ ಎಂಬಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಸ್ತೆಯಿಂದ ಹಲವು ಮೀಟರ್‌ ಗಳಷ್ಟು ದೂರಕ್ಕೆ ಹಾರಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಘಟನೆಯಿಂದ ರಮೀಝ್‌, ಹಿಬಾ ಮತ್ತು ಒಂದು ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಂದು ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಹಿಬಾ ಅವರ ಸಹೋದರಿಯ ಮಗಳು ಫಾತಿಮಾ ಗಂಭೀರ ಗಾಯಗೊಂಡಿದ್ದರೆ, ಮತ್ತೋರ್ವ ಸಹೋದರಿಯ ಮಗ ಈಸ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
    ಫೋನ್ ಮಾಡಿದಾಗ ಅಪಘಾತ ಗೊತ್ತಾಯ್ತು..!
    ಮೆಕ್ಕಾ ತಲುಪಿದ್ದ ಶಮೀಮ್ ಮತ್ತು ಅವರ ಪತ್ನಿ ಝರೀನಾ ತಮ್ಮ ಪುತ್ತರಿಗೆ ಫೋನ್ ಮಾಡಿದ್ದಾರೆ. ಆದ್ರೆ ಫೋನ್ ಸಿಗುತ್ತಿರಲಿಲ್ಲ ಬಳಿಕ ಪುತ್ರಿಗೆ ಮಾಡಿದ್ದ ಕರೆಯನ್ನು ಎತ್ತಿಕೊಂಡ ಪೊಲೀಸ್ ಅಧಿಕಾರಿ ಅಫಘಾತವಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದಾಗ ಅಪಘಾತದ ವಿಚಾರ ಶಮೀಮ್ ಕುಟುಂಬಕ್ಕೆ ತಿಳಿಯಿತು ಎನ್ನಲಾಗಿದೆ.

    ಸೌದಿಯಲ್ಲೇ ದಫನ :
    ಅಪಘಾತ ನಡೆದು ಮೃತಪಟ್ಟಿರುವ ಹಿಬಾ, ಆಕೆಯ ಪತಿ ಮತ್ತು ಮಕ್ಕಳ ಅಂತ್ಯ ಸಂಸ್ಕಾರ ಸೌದಿ ಅರೇಬಿಯಾದಲ್ಲೇ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಅವರ ಕುಟುಂಬದ ಸದಸ್ಯರು ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದು ಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply