LATEST NEWS
ಮದುವೆಗೆ ಬಂದವರು ಸಮುದ್ರ ಪಾಲು..7 ಮಂದಿ ರಕ್ಷಣೆ ಒರ್ವ ಸಾವು ಇನ್ನೊಬ್ಬ ನಾಪತ್ತೆ…!!
ಮಂಗಳೂರು ಜನವರಿ 10: ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ 9 ಮಂದಿಯ ತಂಡದ ಸಮುದ್ರದಲ್ಲಿ ಆಟವಾಡಲು ಹೋಗಿ ನೀರುಪಾಲಾದ ಘಟನೆ ಮೂಲ್ಕಿ ಬಳಿಯ ಸಸಿಹಿತ್ಲು ಮುಂಡ ಬೀಚ್ನಲ್ಲಿ ನಡೆದಿದೆ. ಈ ಘಟನೆಯಲ್ಲಿ 7 ಮಂದಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಒರ್ವ ಸಾವನಪ್ಪಿದ್ದು ಇನ್ನೊಬ್ಬ ನೀರು ಪಾಲಾಗಿದ್ದಾನೆ.
ಮೃತಪಟ್ಟವರನ್ನು ಸಾಣೂರು ಮೂಲದ ಸುಂದರ ಶೆಟ್ಟಿ (45) ಎಂದು ಗುರುತಿಸಲಾಗಿದೆ. ಇವರು ಹಳೆಯಂಗಡಿ ಬಳಿಯ ತೋಕೂರಿನ ಮೂಡುಮನೆಗೆ ಮದುವೆ ಕಾರ್ಯ ನಿಮಿತ್ತ ಶುಕ್ರವಾರ ಬಂದಿದ್ದು ಇಂದು ಸಂಜೆ ಸಸಿಹಿತ್ಲು ಬೀಚ್ಗೆ 11 ಮಂದಿ ತಂಡವಾಗಿ ತೆರಳಿದ್ದರು ಎಂದು ತಿಳಿದು ಬಂದಿದೆ. 9 ಮಂದಿ ನೀರಗಿಳಿದಾಗ ಮಹಿಳೆಯೋರ್ವರು ನೀರಿನ ಸೆಳೆತಕ್ಕೊಳಗಾಗಿ ಮುಳುಗುವ ಹಂತಕ್ಕೆ ತಲುಪಿದ್ದು, ಈ ಸಂದರ್ಭ ಸುಂದರ ಶೆಟ್ಟಿ ಸಹಿತ ಇನ್ನುಷ್ಟು ಮಂದಿ ಮಹಿಳೆಯನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಅವರು ಸಹ ನೀರಿನ ಸೆಳೆತಕ್ಕೊಳಗಾದಾಗ ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಆದರೆ 7 ಮಂದಿಯನ್ನು ರಕ್ಷಣೆ ಮಾಡಲಾಗಿದ್ದ ಇಬ್ಬರು ಸಮುದ್ರ ಪಾಲಾಗಿದ್ದರು. ಅದರಲ್ಲಿ ಒಬ್ಬರ ಶವಪತ್ತೆಯಾಗಿದ್ದು, ನಾಪತ್ತೆಯಾದವರನ್ನು ದಾಮೋದರ ಎಂದು ಗುರುತಿಸಲಾಗಿದೆ. ನೀರು ಪಾಲಾಗಿದ್ದ ಸುಂದರ ಶೆಟ್ಟಿ ಅವರ ಮೃತ ದೇಹವನ್ನು ಸಹ ಮೇಲೆತ್ತಲಾಗಿದೆ.
Facebook Comments
You may like
-
ಕಾರ್ಕಳ – ಸ್ಕೂಟರ್ಗೆ ಬೈಕ್ ಡಿಕ್ಕಿ ಓರ್ವ ಸಾವು
-
ಗೋ ರಕ್ಷಕರ ಮೇಲಿನ ಕೇಸ್ ಹಿಂಪಡೆಯಲು ಚಿಂತನೆ – ಸಚಿವ ಪ್ರಭು ಚವ್ಹಾಣ್
-
ಕಾರು, ವ್ಯಾನ್ ಮೇಲೆ ಉರುಳಿ ಬಿದ್ದ ಕಲ್ಲು ತುಂಬಿದ್ದ ಟ್ರಕ್ – 13 ಮಂದಿ ಸಾವು
-
ಸಿಎಎ ಪ್ರತಿಭಟನೆ ಸಂದರ್ಭ ನಡೆದ ಗೋಲಿಬಾರ್ ಗೆ ಪ್ರತೀಕಾರವಾಗಿ ಪೊಲೀಸ್ ಮೇಲೆ ಹಲ್ಲೆ – ಮಾಯಾ ಗ್ಯಾಂಗ್ ನ ಸದಸ್ಯರ ಆರೆಸ್ಟ್
-
ಪುಟ್ ಪಾತ್ ಮೇಲೆ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟ್ರಕ್ – 15 ಮಂದಿ ಸಾವು
-
ಅನುಮತಿ ಇಲ್ಲದೆ ಡ್ರೋನ್ ಬಳಸಿದರೆ ಕಠಿಣ ಕ್ರಮ – ಪೊಲೀಸ್ ಆಯುಕ್ತರ ಎಚ್ಚರಿಕೆ
You must be logged in to post a comment Login