Connect with us

LATEST NEWS

ಆರ್‌ಸಿಬಿ ಮಹಿಳಾ ತಂಡದ ಸಲಹೆಗಾರರಾಗಿ ಸಾನಿಯಾ ಮಿರ್ಜಾ ನೇಮಕ

ಹೈದರಾಬಾದ್, ಫೆಬ್ರವರಿ 15 : ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರ ತಂಡದ ಸಲಹೆಗಾರರಾಗಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ನೇಮಕ ಮಾಡಲಾಗಿದೆ.

‘ಭಾರತದ ಮುಂಚೂಣಿ ಕ್ರೀಡಾಪಟು, ಯೂತ್ ಐಕಾನ್, ವೃತ್ತಿಜೀವನದುದ್ದಕ್ಕೂ ಧೈರ್ಯಶಾಲಿ ಮತ್ತು ಎಲ್ಲ ಅಡೆತಡೆಗಳನ್ನು ಮೀರಿ ಆಡಿದ ಆಟಗಾರ್ತಿ, ಮೈದಾನದ ಒಳಗೂ ಹೊರಗೂ ಚಾಂಪಿಯನ್ ಸಾನಿಯಾ ಮಿರ್ಜಾ,  ಅವರನ್ನು ಆರ್‌ಸಿಬಿ ಮಹಿಳಾ ಕ್ರಿಕೆಟ್ ತಂಡದ ಸಲಹೆಗಾರರಾಗಿ ಸ್ವಾಗತಿಸಲು ನಾವು ಹೆಮ್ಮೆಪಡುತ್ತೇವೆ’ಎಂದು ಆರ್‌ಸಿಬಿ ಟ್ವಿಟರ್ ಪುಟದಲ್ಲಿ ಬರೆಯಲಾಗಿದೆ.

ಇತ್ತೀಚೆಗೆ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ನ ಮೊದಲ ಹರಾಜಿನಲ್ಲಿ ಆರ್‌ಸಿಬಿ ತಂಡ ಸ್ಮೃತಿ ಮಂದಾನ ಅವರಿಗೆ, ₹3.4 ಕೋಟಿ ಕೊಟ್ಟು ಖರೀದಿಸಿತ್ತು. ಸೋಪಿಯಾ ಡಿವೈನ್, ರೇಣುಕಾ ಸಿಂಗ್ ಮುಂತಾದ ಆಟಗಾರರು ತಂಡದಲ್ಲಿದ್ದಾರೆ.

https://twitter.com/RCBTweets/status/1625698680161402881?ref_src=twsrc%5Etfw%7Ctwcamp%5Etweetembed%7Ctwterm%5E1625698680161402881%7Ctwgr%5E96204fcf31d7474bdad3ad68c9589ddeff5a330e%7Ctwcon%5Es1_&ref_url=https%3A%2F%2Fwww.prajavani.net%2Fsports%2Fcricket%2Frcb-appoint-sania-mirza-as-mentor-for-womens-team-ahead-of-wpl-2023-1015527.html

ದುಬೈನಲ್ಲಿ ತನ್ನ ಟೆನಿಸ್ ವೃತ್ತಿ ಜೀವನದ ಕೊನೆಯ ಪಂದ್ಯಾವಳಿಯನ್ನು ಆಡಲಿರುವ ಮಿರ್ಜಾ, ಆರ್‌ಸಿಬಿ ಫ್ರಾಂಚೈಸಿಯ ಭಾಗವಾಗಲಿದ್ದಾರೆ. ಸಾನಿಯಾ ಮಿರ್ಜಾ, ಕ್ರಿಕೆಟ್ ಅನ್ನು ಬಹಳ ಪ್ರೀತಿಸುತ್ತಾರೆ ಮತ್ತು ಆಗಾಗ್ಗೆ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.

Advertisement
Click to comment

You must be logged in to post a comment Login

Leave a Reply