Connect with us

LATEST NEWS

ಸಂಘನಿಕೇತನ ಗಣೇಶೋತ್ಸವ ಸಮಾಪನ

ಮಂಗಳೂರು  ಅಗಸ್ಟ್ 26:  : ನಗರದ ಕೇಶವ ಸ್ಮ್ರತಿ ಸಂವರ್ಧನ ಸಮಿತಿ ಸಂಘನಿಕೇತನ ಇದರ ಆಶ್ರಯದಲ್ಲಿ ನಡೆಯುವ
೭೩ ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ದ ಐದು ದಿನಗಳ ಪರ್ಯಂತ ಸಂಘನಿಕೇತನದಲ್ಲಿ ನಡೆದ ಗಣೇಶೋತ್ಸವ ಇಂದು ಸಮಾಪನಗೊಂಡಿತು .

ಕೊರೋನಾ ಮಹಾಮಾರಿಯ ತಡೆಗಟ್ಟುವ ಹಿನ್ನೆಲೆಯಲ್ಲಿ ಈ ಬಾರಿ ಅತೀ ಸರಳ ರೀತಿಯಲ್ಲಿ ಗಣೇಶೋತ್ಸವ ಆಚರಿಸಲ್ಪಟ್ಟಿತು . ಈ ಬಾರಿ ಶೋಭಾಯಾತ್ರೆ ಆಯೋಜಿಸಲಿಲ್ಲ ಶ್ರೀ ಮಹಾ ಗಣಪತಿ ದೇವರ ವಿಗ್ರಹವನ್ನು ಕಾರ್ಯಕರ್ತರು ಭುಜ ಸೇವೆಯ ಮುಖಾಂತರ ರಥಬೀದಿಯಲ್ಲಿರುವ ಮಹಾಮಾಯ ತೀರ್ಥದಲ್ಲಿ ಜಲ ಸ್ಥ0 ಭನ ಗೊಳಿಸಲಾಯಿತು . ಬೆಳಿಗ್ಗೆ ಪೂಜೆ ಮಧ್ಯಾನಃ ಮಹಾ ಪೂಜೆ ಬಳಿಕ ವಿಸರ್ಜನಾ ಮಂಗಳಾರತಿ ನಡೆದ ನಂತರ ಶ್ರೀ ದೇವರ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ ಬಳಿಕ ವಿಸರ್ಜನೆ ವಂದೇ ಮಾತರಂ ತದನಂತರ ಜಲ ಸ್ಥo ಭನ ಗೊಳಿಸಲಾಯಿತು .
ಚಿತ್ರ : ಮಂಜು ನೀರೇಶ್ವಾಲ್ಯ

Facebook Comments

comments