ಉಸ್ತುವಾರಿ ಸಚಿವ ಖಾದರ್ ಕ್ಷೇತ್ರದಲ್ಲಿ ಮರಳು ದಂಧೆಕೋರರ ಅಟ್ಟಹಾಸ

ಮಂಗಳೂರು ಫೆಬ್ರವರಿ 2: ಮಂಗಳೂರಿನಲ್ಲಿ ಮರಳು ದಂಧೆಕೋರರ ಅಟ್ಟಹಾಸ ಮುಂದುವರೆದಿದೆ. ಇತ್ತೀಚೆಗೆ ಸರಕಾರದ ಅನುದಾನಕ್ಕೆ ಕಾಯದೇ ತಾವೇ ಹಣ ಒಟ್ಟುಗೂಡಿಸಿ ನಿರ್ಮಿಸಿದ ಸೇತುವೆ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ, ಖಾದರ್ ಅವರ ಸ್ವ ಕ್ಷೇತ್ರದಲ್ಲಿಯೇ ಈ ಅಟ್ಟಹಾಸ ನಡೆದಿದೆ.

ಮಂಗಳೂರಿನ ಅಡ್ಯಾರ್ ನ ಪಾವೂರಿನಲ್ಲಿ ನಿನ್ನೆ ತಡ ರಾತ್ರಿ ಈ ಘಟನೆ ನಡೆದಿದೆ. ಈ ಘಟನೆ ನಡೆದಿದೆ. ಅಕ್ರಮ ಮರಳುಗಾರಿಕೆ ಬಗ್ಗೆ ಪೊಲೀಸ್ ದೂರು ನೀಡಿದ ಹಿನ್ನೆಲೆಯಲ್ಲಿ ಮರಳು ದಂಧೆಕೋರರು ಈ ದಾಂಧಲೆ ನಡೆಸಿದ್ದಾರೆ.

ಅಕ್ರಮ ಮರಳು ದಂಧೆಕೋರರ ಅಟ್ಟಹಾಸಕ್ಕೆ ಇಲ್ಲಿನ ಗ್ರಾಮಸ್ಥರೇ ನಿರ್ಮಿಸಿದ್ದ ಸೇತುವೆ ಹಾಗೂ ಆನೇಕ ವಾಹನಗಳು ಹಾನಿಯಾಗಿದೆ. ಸೇತುವೆ ಬಳಿ ನಿಲ್ಲಿಸಿದ್ದ ಆಟೋ, ಬೈಕ್ ಗಳನ್ನು ದ್ವಂಸ ಮಾಡಿದ ಲೂಟಿಕೋರರು ಸೇತುವೆಗೂ ಹಾನಿ ಮಾಡಿದ್ದಾರೆ.

ಅಕ್ರಮ ಮರಳುಗಾರಿಕೆ ಬಗ್ಗೆ ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆ ನಿನ್ನೆ ಅಧಿಕಾರಿಗಳು ದಾಳಿ ನಡೆಸಿ 5 ಬೋಟ್ ಗಳನ್ನು ವಶಪಡಿಸಿದ್ದರು. ಇದಕ್ಕೆ ಸೇಡು ತೀರಿಸಿಕೊಂಡ ಮರಳು ಮಾಫೀಯಾ ಈ ದಾಂಧಲೆ ನಡೆಸಿದ್ದಾರೆ ಎಂದು ಸ್ಥಳೀಯರು ದೂರಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.

Facebook Comments

comments