ಪಣಂಬೂರು ಕಡಲಕಿನಾರೆಯಲ್ಲಿ ಮರಳು ಕಲಾಕೃತಿ ಮೂಲಕ ಮತದಾನ ಜಾಗೃತಿ

ಮಂಗಳೂರು ಮಾರ್ಚ್ 25: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಸ್ವೀಪ್ ಸಮಿತಿ ಹಾಗೂ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆ ಸಾಕಷ್ಟು ವಿವಿಧ ರೀತಿಯ ಮತ್ತು ವಿಶಿಷ್ಟ ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಆಯೋಜಿಸುತ್ತಿದೆ.

ಮಂಗಳೂರಿನ ಪಣಂಬೂರು ಕಡಲ ಕಿನಾರೆಯಲ್ಲೂ ಇಂತಹ ಮಾದರಿಯ ಕಾರ್ಯಕ್ರಮ ಆಯೋಜಿಸಿತ್ತು. ತೀರದಲ್ಲಿ ಮರಳು ಕಲಾಕೃತಿಯನ್ನು ರಚಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು.

ಮರಳು ಶಿಲ್ಪಿ ಸಂತೋಷ್ ಅವರು ಈ ಕಲಾಕೃತಿಯನ್ನು ನಿರ್ಮಿಸಿದ್ದರು. ಸ್ವೀಪ್ ಸಮಿತಿಯ ಅಧ್ಯಕ್ಷರಾದ ಡಾ. ಸೆಲ್ವಮಣಿ ಆರ್, ಕಲಾಕೃತಿ ವೀಕ್ಷಿಸಿ ಮತದಾನದ ಬಗ್ಗೆ ನೆರೆದವರನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲಾ ವಾರ್ತಾಧಿಕಾರಿ ರೋಹಿಣಿ, ಬೀಚ್ ಅಭಿವೃದ್ದಿಯ ಸಿಇಓ ಯತೀಶ್ ಬೈಕಂಪಾಡಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

2 Shares

Facebook Comments

comments