Connect with us

    LATEST NEWS

    ಅಲೋಶಿಯಸ್ ಕಾಲೇಜು ವಿಧ್ಯಾರ್ಥಿಗಳ ಪ್ರೀತಿಯ ಸಮೋಸ ಅಜ್ಜ ಇನ್ನಿಲ್ಲ…!!

    ಮಂಗಳೂರು ಸೆಪ್ಟೆಂಬರ್ 11: ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಆವರಣದ ಹೊರಗಡೆ ಸುಮಾರು 4 ದಶಕಕ್ಕೂ ಹೆಚ್ಚು ಕಾಲ ಸಮೋಸ ಮಾರಾಟ ಮಾಡುತ್ತಿದ್ದ, ವಿಧ್ಯಾರ್ಥಿಗಳ ಪ್ರೀತಿಯ ಸಮೋಸ ಅಜ್ಜ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.


    ಜೀವನೋಪಾಯಕ್ಕೆ ಉತ್ತರ ಕರ್ನಾಟಕದಿಂದ ಬಂದು ಮಂಗಳೂರಿನಲ್ಲಿ ಸಮೋಸ ಮಾರುತ್ತ ಜೀವನ ಕಟ್ಟಿಕೊಂಡಿದ್ದ ಮುಧುಕೇಶ್ವರ ಮುಡೆಯಪ್ಪ ಮಾಳಗಿ ಇಂದು ವಿಧಿವಶರಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿಯವರಾದ ಮಾಳಗಿ, 45 ವರ್ಷಗಳ ಹಿಂದೆ ತಮ್ಮ ಅಳಿಯನ ಜೊತೆಗೆ ಮಂಗಳೂರಿಗೆ ಆಗಮಿಸಿದ್ದರು. ಸ್ಥಳೀಯ ವಿದ್ಯಾರ್ಥಿಗಳಿಗೆ ಸಮೋಸ ಮಾರುವ ಮೂಲಕ ಸಣ್ಣ ಉದ್ಯಮವವನ್ನು ಆರಂಭಿಸಿದ್ದರು.


    ಸುಮಾರು 44 ವರ್ಷಗಳಿಂದ ನಗರದ ಸೇಂಟ್ ಅಲೋಶಿಯಸ್ ಶಾಲೆ ಮತ್ತು ಕಾಲೇಜು ಆವರಣದ ಹೊರಗಡೆ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಇವರು ಸಮೋಸ ಮಾರಾಟ ಮಾಡುತ್ತಿದ್ದರು. ಹಾಗಾಗಿ, ವಿದ್ಯಾರ್ಥಿಗಳು ಇವರನ್ನು ‘ಸಮೋಸ ಅಜ್ಜ’ ಎಂದೇ ಕರೆಯುತ್ತಿದ್ದರು. ಸೇಂಟ್ ಅಲೋಶಿಯಸ್ ಶಾಲೆಯ ವಿದ್ಯಾರ್ಥಿಗಳು ವಿಶೇಷವಾಗಿ ಊಟದ ಸಮಯದಲ್ಲಿ ಅವರ ಸುತ್ತಲೂ ಗುಂಪುಗೂಡುತ್ತಿದ್ದರು. ಶಾಲೆಯ ಆಡಳಿತ ಮಂಡಳಿಯೂ ಇವರನ್ನು ಸನ್ಮಾನಿಸಿತ್ತು. ಅವರ ಶಿಸ್ತಿನ ಬದುಕು, ವ್ಯಾಪಾರದ ಮೇಲಿನ ಪ್ರೀತಿಯನ್ನು ಮಂಗಳೂರಿನ ಜನತೆ ನೆನಪಿಸಿಕೊಳ್ಳುತ್ತಾರೆ.

    ಸಮೋಸ ಮಾರಾಟದಲ್ಲಿ ಯಶಸ್ಸುಗಳಿಸಿದರೂ, ಮಕ್ಕಳು ಬೆಳೆದು ದೊಡ್ಡವರಾದರೂ, ತಮ್ಮ ವೃತ್ತಿಯನ್ನು ತಾನೇ ಮುನ್ನಡೆಸುತ್ತಿದ್ದರು. ಬರುವ ಗ್ರಾಹಕರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರಿಂದ, ಸಮೋಸ ತಿನ್ನಲು ಜನರು ಹುಡುಕಿಕೊಂಡು ಬರುತ್ತಿದ್ದರು. ಅಣ್ಣಾ ಹಜಾರೆಯವರನ್ನು ಇವರು ಹೋಲುತ್ತಿದ್ದರಿಂದ, ವಿದ್ಯಾರ್ಥಿಗಳು ಇವರನ್ನು ಅಣ್ಣ ಅಜ್ಜ ಎಂದೂ ಕರೆಯುತ್ತಿದ್ದರು. ಇವರು ಹಾಕುವ ಗಾಂಧಿ ಟೋಪಿ, ಕನ್ನಡಕ, ಬಿಳಿ ಜುಬ್ಬ ಮತ್ತು ಹಾಸ್ಯ ಮನೋಭಾವದಿಂದ ಜನಪ್ರಿಯತೆಯನ್ನು ಪಡೆದಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply