Connect with us

LATEST NEWS

ರಾಜ್ಯದ ಎಂಪಿಗಳು ಇಲ್ಲಿ ಮಾತ್ರ ಹುಲಿ, ಮೋದಿ ಎದುರು ಇಲಿ -ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್

ಉಡುಪಿ: ರಾಜ್ಯದಲ್ಲಿ ಕೊರೊನಾ ಹೆಸರನ್ನಿ ನಡೆದಿರುವ ಭ್ರಷ್ಟಾಚಾರವನ್ನು ಮರೆ ಮಾಚಲು ಡ್ರಗ್ಸ್ ಬೆಳವಣಿಗೆಯನ್ನು ತಂದಿದ್ದು, ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ಯತ್ನದಲ್ಲಿ ರಾಜ್ಯ ಸರ್ಕಾರ ತಲ್ಲೀನ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ತಿಳಿಸಿದ್ದಾರೆ.


ಉಡುಪಿಯಲ್ಲಿ ಮಾತನಾಡಿದ ಅವರು ಡ್ರಗ್ಸ್ ಮಾಫಿಯಾ ಪೊಲಿಟಿಕಲ್ ಟ್ರಯಲ್ ಆಗಬಾರದು. ಬಿಜೆಪಿ ನಾಯಕರು ಪೊಲೀಸರ ತರ, ತನಿಖಾಧಿಕಾರಿಗಳ ತರ ವರ್ತಿಸುತ್ತಾರೆ. ಸ್ಟೇಟ್ ಮೆಂಟ್ ಸಾಕು, ಕೆಲಸ ಮಾಡಿ ಎಂದು ಸಲೀಂ ಹೇಳಿದರು. ಸಚಿವ ಸಿಟಿ ರವಿಗೆ ಯಾರಿಂದ ಒತ್ತಡ ಇದೆ ಹೇಳಲಿ. ನೀವು ಸಿಎಂ ಅಲ್ಲ, ಗೃಹ ಸಚಿವ ಕೂಡಾ ಅಲ್ಲ. ಕಾಂಗ್ರೆಸ್ ಒತ್ತಡ ಯಾವತ್ತೂ ಹೇರಲ್ಲ. ಕೇಂದ್ರ ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಇದೆ ತನಿಖೆ ಮಾಡಿ. ತನಿಖೆಗೆ ಬೆಂಬಲ ಕೊಡುತ್ತೇವೆ. ಕೇವಲ ಹೇಳಿಕೆಯಿಂದ ವ್ಯವಸ್ಥೆ ಸರಿ ಮಾಡಲು ಸಾಧ್ಯವಿಲ್ಲ. ರಾಗಿಣಿ ಬಿಜೆಪಿಯ ಕಾರ್ಯಕರ್ತೆ. ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.


ನೆರೆ ಹಾವಳಿ ಪರಿಹಾರ ಬಂದಿಲ್ಲ. ನಮ್ಮ ರಾಜ್ಯದ ಎಂಪಿಗಳು ಇಲ್ಲಿ ಹುಲಿಯಂತೆ ವರ್ತಿಸುತ್ತೀರಿ. ಮೋದಿ ಮುಂದೆ ಬೆಕ್ಕಿನ ನಿಲ್ಲುತ್ತೀರಿ. ಮೊದಲು ಮಾತನಾಡಲು ಕಲಿಯಿರಿ. ರಾಜ್ಯದ ಹಿತಾಸಕ್ತಿ ಕಾಪಾಡಿ ಪಲಾಯನ ವಾದ ಮಾಡುದರಲ್ಲಿ ಕಾಲ ಕಳೆಯಬೇಡಿ. ರಾಜ್ಯ ಸರ್ಕಾರದ ಹಗರಣ, ವೈಫಲ್ಯ ವಿಚಾರದಲ್ಲಿ ಜೆಡಿಎಸ್ ಮೌನದ ಬಗ್ಗೆ ಅವರನ್ನೇ ಕೇಳಿ. ಯಡಿಯೂರಪ್ಪ ಕುಮಾರಸ್ವಾಮಿ ಭೇಟಿ ಬಗ್ಗೆ ಅವರೇ ಬಹಿರಂಗಪಡಿಸಲಿ ಎಂದರು.  ಜಮೀರ್ ವಿಚಾರದಲ್ಲಿ ಮಾಧ್ಯಮಗಳ ಮೂಲಕ ದಾರಿ ತಪ್ಪಿಸಲಾಗುತ್ತಿದೆ. ಯಾರು ತಪ್ಪು ಮಾಡಿದರೂ ಶಿಕ್ಷೆ ಆಗಬೇಕು. ಮೀಡಿಯಾ ಟ್ರಯಲ್ ಸರಿಯಲ್ಲ ಎಂದರು.

Facebook Comments

comments