ಪತ್ತನಂತಿಟ್ಟ ನವೆಂಬರ್ 21: ಕೇರಳ ಹೈಕೋರ್ಟ್ ನಿರ್ದೇಶನದ ಮೇರೆಗೆ ಶಬರಿಮಲೆಯಲ್ಲಿ ಸ್ಪಾಟ್ ಬುಕ್ಕಿಂಗ್ ಸಂಖ್ಯೆ ದಿನಕ್ಕೆ 5,000 ಕ್ಕೆ ಸೀಮಿತಗೊಳಿಸಲಾಗಿದ್ದು, ಇದರೊಂದಿಗೆ ಎರಡು ದಿನಗಳ ಉಂಟಾಗಿದ್ದ ಭಕ್ತರ ದಟ್ಟಣೆ ಸಂಪೂರ್ಣ ಕಡಿಮೆಯಾಗಿದೆ ಎಂದು ವರದಿಯಾಗಿದೆ. ಬುಧವಾರ ರಾತ್ರಿಯಿಂದ ಜಾರಿಗೆ ಬಂದ ನಿರ್ಬಂಧಗಳು ನವೆಂಬರ್ 24 ರವರೆಗೆ ಇರುತ್ತವೆ.

ಈಗ ನೀಲಕ್ಕಲ್ ಮತ್ತು ವಂಡಿಪೆರಿಯಾರ್‌ನಲ್ಲಿ ಮಾತ್ರ ಸ್ಪಾಟ್ ಬುಕಿಂಗ್ ಲಭ್ಯವಿರುತ್ತದೆ, ಆದರೆ ಪಂಪಾ, ಎರುಮೆಲಿ ಮತ್ತು ಚೆಂಗನ್ನೂರಿನಲ್ಲಿರುವ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ದರ್ಶನ ಸ್ಲಾಟ್‌ಗಳನ್ನು ಪಡೆಯಲು ಭಕ್ತರು ವರ್ಚುವಲ್ ಕ್ಯೂ ವ್ಯವಸ್ಥೆಯನ್ನು ಅವಲಂಬಿಸುವಂತೆ ಟಿಡಿಬಿ ಒತ್ತಾಯಿಸಿದೆ.
Read This – ಶಬರಿಮಲೆ ಅಯ್ಯಪ್ಪನ ನೋಡಲಾಗದೇ ಕಣ್ಣೀರಿಟ್ಟ ಮಹಿಳೆಯರು…ಲಕ್ಷಾಂತರ ಜನರ ನಡುವೆ ನಡೆದ ಪವಾಡ..!!
ನವೆಂಬರ್ 17 ರಂದು ದೇವಾಲಯ ತೆರೆದ 48 ಗಂಟೆಗಳ ಒಳಗೆ ಸುಮಾರು ಎರಡು ಲಕ್ಷ ಯಾತ್ರಿಕರು ಶಬರಿಮಲೆಗೆ ಆಗಮಿಸಿದ್ದರು, ಇದು ಶಬರಿಮಲೆಯ ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡಿತ್ತು. ಬಳಿಕ ಕೇರಳ ಹೈಕೋರ್ಟ್ ಮಧ್ಯಪ್ರವೇಶಿಸಿ, ಸ್ಪಾಟ್ ಬುಕ್ಕಿಂಗ್ ಕಡಿಮೆ ಮಾಡಲು ಸೂಚಿಸಿತ್ತು. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ನ್ಯಾಯಾಲಯವು ಆದೇಶಿಸಿದ 5,000 ಪಾಸ್‌ಗಳನ್ನು ಮಾತ್ರ ಕೌಂಟರ್‌ಗಳು ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಹುತೇಕ ಶಬರಿಮಲೆಯಲ್ಲಿ ಭಕ್ತಾಧಿಗಳ ಸಂಖ್ಯೆ ಕಡಿಮೆ ಇದೆ ಎಂದು ಮನೋರಮಾ ಪತ್ರಿಕೆ ವರದಿ ಮಾಡಿದೆ.



