ತಿರುವನಂತಪುರಂ ಜನವರಿ 09: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರ ಶಬರಿಮಲೆ ತಂತ್ರಿ ಕಂದರರು ರಾಜೀವರು (ಪ್ರಧಾನ ಅರ್ಚಕ) ಅವರನ್ನು ಬಂಧಿಸಿದೆ.


2019 ರ ಟಿಡಿಬಿ ದಾಖಲೆಗಳ ಪ್ರಕಾರ, ಶಬರಿಮಲೆ ಕಾರ್ಯನಿರ್ವಾಹಕ ಅಧಿಕಾರಿಯ ಶಿಫಾರಸು ಮತ್ತು ತಂತ್ರಿಗಳ ಅಭಿಪ್ರಾಯದ ಆಧಾರದ ಮೇಲೆ, ದೇವಸ್ವಂ ಆಯುಕ್ತರು ಉನ್ನಿಕೃಷ್ಣನ್ ಪೊಟ್ಟಿ ಅವರಿಗೆ ಗರ್ಭಗುಡಿಯ ಬಾಗಿಲುಗಳ ಎರಡೂ ಬದಿಗಳಲ್ಲಿರುವ ದ್ವಾರಪಾಲಕರನ್ನು ಆವರಿಸಿರುವ ತಾಮ್ರದ ಹಾಳೆಗಳು ಹಾಗೂ ಗರ್ಭಗುಡಿಯ ದಕ್ಷಿಣ ಮತ್ತು ಉತ್ತರ ಮೂಲೆಗಳನ್ನು ಆವರಿಸಿರುವ ತಾಮ್ರದ ಹಾಳೆಗಳ ದುರಸ್ತಿ ಕಾರ್ಯಗಳು ಮತ್ತು ಚಿನ್ನದ ಲೇಪನವನ್ನು ಕೈಗೊಳ್ಳಲು ಅನುಮತಿ ನೀಡಿದರು.

ಚಿನ್ನಕಳ್ಳತನ ಪ್ರಕರಣದಲ್ಲು ತಂತ್ರಿಗಳ ಪಾತ್ರದ ಬಗ್ಗೆ ಮೊದಲಿನಿಂದಲೂ ಶಂಕಿಸಲಾಗಿದ್ದರೂ, ಆರೋಪಿಗಳ ಜಾಮೀನು ತಡೆ ಅರ್ಜಿ ಸಹಿತ ತಂತ್ರಿಗಳ ಪಾತ್ರವನ್ನು ಎಲ್ಲೂ ಉಲ್ಲೇಖಿಸದೆ ರಹಸ್ಯಾತ್ಮಕ ಕ್ರಮ ಕೈಗೊಂಡಿದೆ. ತಂತ್ರಿಗಳು ನಿರೀಕ್ಷಣಾ ಜಾಮೀನು ತಡೆಯುವ ಕ್ರಮದ ಭಾಗವಾಗಿ ತಿರುವಿದಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಅಧ್ಯಕ್ಷ ಪದ್ಮಕುಮಾರ್ ಅವರ ಜಾಮೀನು ಅರ್ಜಿಯಲ್ಲಿ ತಂತ್ರಿಗಳ ಪಾತ್ರವನ್ನು ಮರೆಮಾಡಲು ಎಸ್ ಐಟಿ ವಿಶೇಷ ಕಾಳಜಿ ವಹಿಸಿ ತಂತ್ರಗಾರಿಕೆ ನಡೆಸಿದೆ.

ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋಟ್ಟಿಯನ್ನು ಶಬರಿಮಲೆಗೆ ಕರೆಸಿರುವುದು, ಶಬರಿಮಲೆಯಲ್ಲಿ ಬೇಕಾ ಬಿಟ್ಟಿ ಸ್ವಾತಂತ್ರ್ಯದ ಅವಕಾಶ ಒದಗಿಸಿದ್ದು ತಂತ್ರಿಗಳು ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. ಶಬರಿಮಲೆಯ ಅರ್ಚಕರಿಗೆ ಸಹಾಯ ಒದಗಿಸುತ್ತಾ, ಯಾವುದೋ ಕಾರಣಕ್ಕೆ ಶಬರಿಮಲೆಯಿಂದ ಒಮ್ಮೆ ಹೊರ ಹಾಕಲ್ಪಟ್ಟ ಪೋಟ್ಟಿಯನ್ನು ಪ್ರಾಯೋಜಕತ್ವದ ಮರೆಯಲ್ಲಿ ಮತ್ತೆ ಶಬರಿಮಲೆಗೆ ಕರೆಸಿರುವುದು ಕಂಠರರ್ ರಾಜೀವರ್ ಆಗಿದ್ದರು ಎಂದು ತನಿಖಾ ತಂಡ ಹೇಳಿದೆ. ಶಬರಿಮಲೆಯಲ್ಲಿ ನಾನಾ ಹಂತಗಳಲ್ಲಿ ನಡೆದ ಚಿನ್ನ ಲೂಟಿಯ ಬಗ್ಗೆ ತಂತ್ರಿಗಳಿಗೆ ತಿಳಿದಿತ್ತು ಎಂಬ ಮಾಹಿತಿಯೂ ತನಿಖಾ ತಂಡಕ್ಕೆ ಲಭಿಸಿದೆ. ಚಿನ್ನ ಹಸ್ತಾಂತರಕ್ಕೆ ಸಂಬಂಧಿಸಿ ತಂತ್ರಿಗಳ ಅನುಮತಿಯನ್ನೂ ಮರೆ ಮಾಚಲಾಗಿತ್ತು.

ಇದರೊಂದಿಗೆ ಶಬರಿಮಲೆ ಚಿನ್ನಕ್ಕೆ ಕೈಹಾಕಿದ ಎಲ್ಲರೂ ಇದೀಗ ಜೈಲು ಮೆಟ್ಟಿಲು ಹತ್ತುವಂತಾಗಿದೆ.

Share Information