ಮಂಗಳೂರು , ಮಾರ್ಚ್ 18: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದಿಢೀರ್ ಬೆಳವಣಿಗೆಯೊಂದು ನಡೆದಿದ್ದು, ರಷ್ಯಾದಿಂದ ಚೀನಾಕ್ಕೆ ಕಚ್ಚಾ ತೈಲ ಹೊತ್ತು ಸಾಗುತ್ತಿದ್ದ ಬೃಹತ್ ಟ್ಯಾಂಕರ್ ಹಡಗು ಮಾರ್ಗ ಮಧ್ಯದಲ್ಲೇ ಪಥ ಬದಲಿಸಿದೆ. ಅರಬ್ಬಿ ಸಮುದ್ರದಲ್ಲಿ ‘ಯೂ-ಟರ್ನ್’ ಪಡೆದಿರುವ ಈ ನೌಕೆಯು ಈಗ ಮಂಗಳೂರು ಬಂದರಿನತ್ತ ಮುಖ ಮಾಡಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ ಮೂಡಿಸಿದೆ.

ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಜನವರಿ ಅಂತ್ಯದಲ್ಲಿ ಬಾಲ್ಟಿಕ್ ಸಮುದ್ರದ ಬಂದರಿನಿಂದ ಲೋಡ್ ಮಾಡಲಾದ ಅಕ್ವಾ ಟೈಟಾನ್ ಮಾರ್ಚ್ 21 ರಂದು ನವಮಂಗಳೂರಿಗೆ ಆಗಮಿಸಲಿದೆ ಎಂದು ವರದಿಯಾಗಿದೆ. ಚೀನಾಕ್ಕೆ ತೆರಳಲು ಉದ್ದೇಶಿಸಲಾಗಿದ್ದ ರಷ್ಯಾದ ತೈಲವನ್ನು ಸಾಗಿಸುತ್ತಿದ್ದ ಕನಿಷ್ಠ ಏಳು ಟ್ಯಾಂಕರ್ಗಳು ಮಾರ್ಗ ಮಧ್ಯದಲ್ಲಿಯೇ ಮಾರ್ಗ ಬದಲಾಯಿಸಿವೆ ಮತ್ತು ಈಗ ಭಾರತಕ್ಕೆ ತೆರಳುತ್ತಿವೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.
ಈ ಏಳು ಹಡಗುಗಳಲ್ಲಿ, ಮಧ್ಯಮ ಗಾತ್ರದ ಕಚ್ಚಾ ತೈಲ ಟ್ಯಾಂಕರ್ ಆದ ಅಕ್ವಾ ಟೈಟಾನ್ ಶನಿವಾರ (ಮಾರ್ಚ್ 21) ನವ ಮಂಗಳೂರು ಬಂದರಿಗೆ ಆಗಮಿಸಲಿದೆ. ಜನವರಿ ಅಂತ್ಯದಲ್ಲಿ ಬಾಲ್ಟಿಕ್ ಸಮುದ್ರ ಬಂದರಿನಲ್ಲಿ ಲೋಡ್ ಮಾಡಲಾದ ಈ ಟ್ಯಾಂಕರ್ ಮೂಲತಃ ಚೀನಾದ ರಿಜಾವೊ ಬಂದರಿಗೆ ಹೋಗುತ್ತಿತ್ತು. ಆದಾಗ್ಯೂ, ಭಾರತಕ್ಕೆ ಅಮೆರಿಕದ ವಿನಾಯಿತಿ ದೊರೆತ ಕೆಲವು ದಿನಗಳ ನಂತರ, ಮಾರ್ಚ್ ಮಧ್ಯದಲ್ಲಿ ಅದು ಯು-ಟರ್ನ್ ಮಾಡಿತು.