ದೆಹಲಿ, ಡಿಸೆಂಬರ್ 03: ಭಾರತದ ರೂಪಾಯಿ ಮೌಲ್ಯ ಬುಧವಾರ ಮೊದಲ ಭಾರಿಗೆ ಡಾಲರ್ ಎದುರು 90 ರೂಪಾಯಿಗೆ ಕುಸಿದಿದೆ.
ಅಮೆರಿಕಾದ ಡಾಲರ್ ಎದುರು ರೂಪಾಯಿ ಅಪಮೌಲ್ಯ ತೀವ್ರವಾಗಿದ್ದು, ಒಂದು ಡಾಲರ್‌ಗೆ ಭಾರತದ ರೂಪಾಯಿ ಮೌಲ್ಯ 90 ರೂಪಾಯಿ 13 ಪೈಸೆಗೆ ಕುಸಿದಿದೆ. ಇದು ಸಾರ್ವಕಾಲಿಕ ಕುಸಿತ. ದಾಖಲೆಯ ಕನಿಷ್ಠ ಮಟ್ಟಕ್ಕೆ ರೂಪಾಯಿ ಮೌಲ್ಯ ಕುಸಿದಿದೆ. ನಿನ್ನೆ ಡಾಲರ್ ಎದುರು ರೂಪಾಯಿ ಮೌಲ್ಯ 89.94 ರೂಪಾಯಿ ಇತ್ತು.
ಭಾರತ ಮತ್ತು ಅಮೆರಿಕಾದ ನಡುವಿನ ವ್ಯಾಪಾರ ಅನಿಶ್ಚಿತತೆ ಹಾಗೂ ಬಂಡವಾಳದ ಹರಿವಿನಲ್ಲಿ ಕುಸಿತ ಹಾಗೂ ಭಾರತದ ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಕುಸಿತದ ಕಾರಣದಿಂದ ಡಾಲರ್ ಎದುರು ರೂಪಾಯಿ ಅಪಮೌಲ್ಯ ಕುಸಿದಿದೆ. ಕಳೆದ ಒಂದು ವರ್ಷದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಶೇ.6 ರಷ್ಟು ಕುಸಿದಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವು ಭಾರತದ ಷೇರು ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ನಿಫ್ಟಿ ಸೂಚ್ಯಂಕ 26 ಸಾವಿರ ಪಾಯಿಂಟ್ ಗಿಂತ ಕೆಳಕ್ಕೆ ಕುಸಿದಿದೆ. ಇದು ಹೂಡಿಕೆದಾರರಲ್ಲಿ ಇರುವ ಎಚ್ಚರಿಕೆಯ ಭಾವನೆಯನ್ನು ಪ್ರತಿಬಿಂಬಿಸುತ್ತದೆ. ಇನ್ನೂ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 200 ಪಾಯಿಂಟ್ ಗಳ ಕುಸಿತ ದಾಖಲಿಸಿದೆ.
ಡಾಲರ್ ಎದುರು ರೂಪಾಯಿ ಕುಸಿತದಿಂದ ವಿದೇಶಗಳಿಂದ ಅಮದು ಮಾಡಿಕೊಳ್ಳುವ ಉತ್ಪನ್ನಗಳ ಬೆಲೆಯನ್ನು ದುಬಾರಿಯಾಗಿಸುತ್ತದೆ. ರಫ್ತು ಮಾಡಿದ ಉತ್ಪನ್ನಗಳಿಗೆ ಹೆಚ್ಚಿನ ಹಣ ಸಿಗುತ್ತೆ.



