Connect with us

    LATEST NEWS

    ಪೊಲೀಸ್ ಹಾಗೂ ಆರ್ ಟಿಓ ಜಂಟಿ ಕಾರ್ಯಾಚರಣೆ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ 36 ಖಾಸಗಿ ಬಸ್ ವಶಕ್ಕೆ

    ಪೊಲೀಸ್ ಹಾಗೂ ಆರ್ ಟಿಓ ಜಂಟಿ ಕಾರ್ಯಾಚರಣೆ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ 36 ಖಾಸಗಿ ಬಸ್ ವಶಕ್ಕೆ

    ಮಂಗಳೂರು ಅಕ್ಟೋಬರ್ 15: ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಣೆ ನಡೆಸುತ್ತಿದ್ದ 36 ಖಾಸಗಿ ಬಸ್ ಗಳನ್ನು ಮಂಗಳೂರು ಪೊಲೀಸರು ಹಾಗೂ ಆರ್ ಟಿಓ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

    ಮಂಗಳೂರಿನಲ್ಲಿ ಖಾಸಗಿ ಬಸ್ ಗಳು ಮೀತಿ ಮೀರಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವ ಕುರಿತು ಹಲವಾರು ಕಂಪ್ಲೇಟ್ ಗಳು ಪೊಲೀಸ್ ಹಾಗೂ ಆರ್ ಟಿ ಓ ಗೆ ಬಂದಿದ್ದವು, ಈ ಬಗ್ಗೆ ನಿಯಮ ಉಲ್ಲಂಘನೆಯ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಅಧಿಕಾರಿಗಳು ಬಸ್ ಮಾಲಕರಿಗೆ ನೀಡಿದ್ದರು ಆದರೂ ಕ್ಯಾರೇ ಅನ್ನದ ಖಾಸಗೀ ಬಸ್ ಗಳ ಮಾಲಿಕರಿಗೆ ಪೊಲೀಸ್ ಇಲಾಖೆ ಹಾಗು ಆರ್ ಟಿ ಓ ಇಂದು ಬಿಸಿ ಮುಟ್ಟಿಸಿದ್ದಾರೆ.

    ನಿಯಮಗಳನ್ನು ಉಲ್ಲಂಘಿಸಿ ಓಡಾಡುತ್ತಿದ್ದ ಖಾಸಗಿ ಬಸ್ ಗಳ ವಿರುದ್ದ ಕಾರ್ಯಾಚರಣೆಗೆ ಇಳಿದ ಪೊಲೀಸ್ ಇಲಾಖೆ ಹಾಗು ಆರ್ ಟಿ ಓ ಅಧಿಕಾರಿಗಳು ನಿಯಮ ಮೀರಿ ಓಡಾಡುತ್ತಿದ್ದ ಖಾಸಗೀ ಸಿಟಿ ಬಸ್ ಗಳನ್ನು ವಶಪಡಿಸಿಕೊಂಡಿದ್ದಾರೆ.

    ಜಂಟಿಯಾಗಿ ಕಾರ್ಯಾಚರಣೆ ನಡೆಸಿದ ಮಂಗಳೂರು ಆರ್’ಟಿಒ ಮತ್ತು ಪೊಲೀಸ್ ಅಧಿಕಾರಿಗಳು, ಕರ್ಕಶ ಹಾರ್ನ್ ಬಳಕೆ, ರಸ್ತೆ ನಿಯಮ ಉಲ್ಲಂಘನೆ , ಪರ್ಮಿಟ್ ಇಲ್ಲದೇ ಸಂಚಾರ ನಡೆಸುತ್ತಿದ್ದ 36 ಸಿಟಿ ಬಸ್ ಗಳನ್ನು ವಸಪಡಿಸಕೊಂಡಿದ್ದಾರೆ. ವಶಪಡಿಸಿಕೊಂಡ ಬಸ್ ಗಳನ್ನು ನಗರದ ನೆಹರು ಮೈದಾನದಲ್ಲಿ ಇರಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply