DAKSHINA KANNADA
‘ RSS ಮಹಿಳೆಯರಿಗೆ ವಿಶೇಷ ಗೌರವ, ಸ್ಥಾನಮಾನ ನೀಡುತ್ತೆ, ಆದ್ರೆ ಪ್ರಭಾಕರ್ ಭಟ್ರ್ ಯಾಕೆ ಹಿಂಗೆ..!? ‘
ಸುರತ್ಕಲ್ : ದೇಶದಲ್ಲಿ ಭಾರತಮಾತೆ ಮತ್ತು ಮಹಿಳೆಯರಿಗೆ ಆರ್‌ಎಸ್‌ಎಸ್ ವಿಶೇಷ ಗೌರವ ಮತ್ತು ಸ್ಥಾನಮಾನ ನೀಡುತ್ತಾರೆ. ಆದರೆ, ಅದೇ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮುಸ್ಲಿಂ ಮಹಿಳೆಯರ ಬಗ್ಗೆ ತೀವ್ರ ಅವಹೇಳನ ಮಾಡಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ರೀತಿ ನಾನು ಮಹಿಳೆಯರ ಬಗ್ಗೆ ಮಾತನಾಡಿದ್ದರೆ ಅವರ ಗುಂಪಿನವರು ನಮ್ಮ ಮನೆಯನ್ನೇ ಸುಟ್ಟು ಹಾಕುತ್ತಿದ್ದರು ಎಂದು ಮಾಜಿ ಶಾಸಕ ಮೊಯಿದ್ದೀನ್ ಬಾವಾ ಹೇಳಿದ್ದಾರೆ.
ಮುಸ್ಲಿಂ ಮಹಿಳೆಯರ ಬಗ್ಗೆ ಕಲ್ಲಡ್ಕ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ ವಿಚಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಆರ್‌ಎಸ್‌ಎಸ್‌ನವರು ಮಾತೆಗೆ ವಿಶೇಷ ಸ್ಥಾನಮಾನ ನೀಡುತ್ತಾರೆ. ಭಾರತದಲ್ಲಿ ಜಾತಿ ಧರ್ಮ ಮೀರಿ ಮಹಿಳೆಯರಿಗೆ ಮಾತೆಯ ಸ್ಥಾನವನ್ನ ಕೊಟ್ಟಿದ್ದೀವಿ. ಕಲ್ಲಡ್ಕ ಪ್ರಭಾಕರ್ ಭಟ್ರು ನೀಡಿದ ಹೇಳಿಕೆಯಿಂದ ಒಂದು ಸಮುದಾಯ ಮಾತ್ರವಲ್ಲ, ಪ್ರತಿಯೊಂದು ಹೆಂಗಸರಿಗೂ ನೋವಾಗುವ ಪರಿಸ್ಥಿತಿಯಾಗಿದೆ. ಆದರೆ ಯಾರೂ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಿಲ್ಲ. ಇನ್ನೊಂದು ತಂಡವಾಗಿದ್ದರೆ ಏನು ಮಾಡ್ತಾಯಿದ್ರು ನಿಮಗೆ ಗೊತ್ತಿದೆ ಎಂದು ಕಿಡಿಕಾರಿದರು. ಒಬ್ಬೊಬ್ಬರಿಗೆ ಒಂದೊಂದು ಕಾನೂನು ಅಲ್ಲ, ಎಲ್ಲರಿಗೂ ಒಂದೇ ಕಾನೂನು ಇರಬೇಕು. ಬ್ರಾಹ್ಮಣ ಸಮುದಾಯದಲ್ಲಿ ಮಹಿಳೆಯರಿಗೆ ಒಳ್ಳೆ ಸ್ಥಾನಮಾನ ನೀಡಲಾಗುತ್ತದೆ. ಇಳಿವಯಸ್ಸಿನಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರು ನೀಡಿದ ಹೇಳಿಕೆ ನಮಗೆ ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಿಸಿದೆ ಎಂದು ಹೇಳಿದರು. ಸರಕಾರ ಶಾಂತಿ ಸುವ್ಯವಸ್ಥೆಗೆ ಹಾನಿಯಾಗುತ್ತೆ ಎಂದು ಪ್ರಭಾಕರ್ ಭಟ್ ಬಂಧಿಸದಿರೋದು ಸರಿಯಲ್ಲ. ಶಾಂತಿ ಸುವ್ಯವಸ್ಥೆ ಎಂದು.. ಅವನು ಏನು ಮಾಡಿದ್ರು ಸರಿನಾ? ಮುಲಾಜಿಲ್ಲದೆ ಹೇಳುತ್ತೇನೆ. ಸರಕಾರವನ್ನು ನಂಬಿ ಶೇ.98 ಅಲ್ಪಸಂಖ್ಯಾತರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಫ್ರೀ ಕೊಡಿ, ಅದು ಕೊಡಿ ಇದು ಕೊಡಿ ಎಂದಲ್ಲ. ಶಾಂತಿ ನೆಮ್ಮದಿ ಕೊಡಿ ಎಂದು ಮತ ಹಾಕಿರೋದು. ಯಾರು ಭಯೋತ್ಪಾದನೆ ಮಾಡ್ತಾರೆ ತೊಂದರೆ ಕೊಡ್ತಾರೆ ಅವರನ್ನ ಸರಕಾರ ಮುಲಾಜಿಲ್ಲದೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಕಲ್ಲಡ್ಕ ಪ್ರಭಾಕರ್ ಅವರ ವಿವಾದಾತ್ಮಕ ಹೇಳಿಕೆ ಕುರಿತು ಸರಕಾರ ಎಜಿ ಮೂಲಕ ನಿನ್ನೆ ಏನು ಮಾಡಿದ್ದಾರೆ ಎಲ್ಲರಿಗೂ ತಿಳಿದಿದೆ. ಹಾಗಾದ್ರೆ ಅವನು ಏನು ಬೇಕಾದ್ರು ಮಾಡಲಿ. ಶಾಂತಿ ಸುವ್ಯವಸ್ಥೆ ಎಂದು ಏನು ಬೇಕಾದ್ರೂ ಮಾಡಬಹುದಾ? ವ್ಯಕ್ತಿ ಪ್ರಮುಖ ಅಲ್ಲ ಕಾನೂನು ಯಾರು ಮೀರಬಾರದು. ಕಾನೂನು ಯಾಕೆ ಇರೋದು? ಸರಕಾರ ಯಾಕೆ ಇರೋದು? ಹಾಗಾದ್ರೆ ಒಬ್ಬನನ್ನು ಕೊಂದರೂ ಬಿಟ್ಟು ಬಿಡೋದಾ? ಇದೆ ಹೇಳಿಕೆ ನಾನು ಕೊಟ್ಟಿದ್ರೆ ನನ್ನ ಮನೆಯನ್ನ ಸುಟ್ಟು ಹಾಕುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
You must be logged in to post a comment Login