ನವದೆಹಲಿ ನವೆಂಬರ್ 08: ಭಾರತ ಕ್ರಿಕೆಟ್ ತಂಡದ ವೇಗಿ ಮಹಮ್ಮದ್ ಶಮಿ ಮಾಜಿ ಪತ್ನಿ ಇದೀಗ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾಳೆ. ಜೀವನ ನಿರ್ವಹಣೆಗೆ ತಿಂಗಳಿಗೆ 4 ಲಕ್ಷ ರೂ ಹಣ ಸಾಕಾಗುವುದಿಲ್ಲ ಕನಿಷ್ಟ 10 ಲಕ್ಷ ಬೇಕು ಎಂದು ಅರ್ಜಿ ಸಲ್ಲಿಸಿದ್ದಾಳೆ.


ಭಾರತ ತಂಡದ ಸ್ಟಾರ್ ಆಟಗಾರ ಮಹಮದ್ ಶಮಿ ಸಾಂಸಾರಿಕ ಜೀವನದಲ್ಲಿ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಈಗಾಗಲೇ ಪತ್ನಿ ಹಸಿನ್ ಜಹಾನ್ ಗೆ ವಿಚ್ಚೇದನ ನೀಡಿದ್ದಾರೆ. ಆದರೆ ಅವರ ಮಾಜಿ ಪತ್ನಿ ಮಾತ್ರ ಅವರ ಮೇಲೆ ಕೋರ್ಟ್ ಕೇಸ್ ಹಾಕುತ್ತಲೇ ಇದ್ದಾರೆ. ಇದೀಗ ಮತ್ತೆ ಜೀವನಾಂಶ ಹೆಚ್ಚಿಸುವಂತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ತನ್ನ ಜೀವನಾಂಶವನ್ನು ತಿಂಗಳಿಗೆ 10 ಲಕ್ಷಕ್ಕೆ ಹೆಚ್ಚಿಸಬೇಕೆಂದು ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.

4 ಲಕ್ಷ ರೂ ಜೀವನ ನಿರ್ವಾಹಣೆಗೆ ಸಾಕಾಗುತ್ತಿಲ್ಲ ಎಂದು ಹಸಿನ್ ಜಹಾನ್ ಇದೀಗ ಕೋಲ್ಕತ್ತಾ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ, ತನ್ನ ಮತ್ತು ತನ್ನ ಮಗಳ ಮಧ್ಯಂತರ ಭತ್ಯೆಯನ್ನು 10 ಲಕ್ಷ ರೂಗಳಿಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ. ಈಗ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ಹಸಿನ್ ಜಹಾನ್, ಶಮಿ ಬಳಿ ಸುಮಾರು 500 ಕೋಟಿ ಮೌಲ್ಯದ ಆಸ್ತಿ ಇದೆ. ಅಲ್ಲದೆ ಶಮಿ ಮತ್ತು ನನ್ನ ಜೀವನ ನಿರ್ವಾಹಣೆಯಲ್ಲಿ ಗಮನಾರ್ಹ ವ್ಯತ್ಯಾಸವಿದೆ. ಆದ್ದರಿಂದ ಶಮಿ, ನನ್ನ ಮತ್ತು ನನ್ನ ಮಗಳ ಜೀವನ ಮಟ್ಟವನ್ನು ಸುಧಾರಿಸಲು ಬೇಕಾಗುವಷ್ಟು ಜೀವನಾಂಶವನ್ನು ನೀಡುತ್ತಿಲ್ಲ ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇನ್ನೂ ಯಾವುದೇ ಆದೇಶ ಹೊರಡಿಸಿಲ್ಲ. ಬದಲಿಗೆ ಹಸಿನ್ ಜಹಾನ್ ಅವರನ್ನೇ ಪ್ರಶ್ನಿಸಿರುವ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಹಸಿನ್ ಜಹಾನ್ ಅವರ ವಕೀಲರ ಬಳಿ, ‘ಸಂತ್ರಸ್ತೆಗೆ ತಿಂಗಳಿಗೆ 4 ಲಕ್ಷ ಕೂಡ ಸಾಕಾಗುವುದಿಲ್ಲವೇ’ ಎಂದು ಕೇಳಿದೆ.

Share Information