ರೌಡಿಶೀಟರ್ ಭವಿತ್ ರಾಜ್ ಮೇಲೆ ಪೊಲೀಸ್ ಪೈರಿಂಗ್

ಮಂಗಳೂರು ಜೂನ್ 9: ರೌಡಿಶೀಟರ್ ಭವಿತ್ ರಾಜ್ ಮೇಲೆ ಕಂಕನಾಡಿ ಪೊಲೀಸರು ಫೈರಿಂಗ್ ನಡೆಸಿರುವ ಘಟನೆ ನಡೆದಿದೆ.
ರೌಡಿಶೀಟರ್ ಭವಿತ್ ರಾಜ್ ನನ್ನು ಪ್ರಕರಣವೊಂದರ ಸಂಬಂಧ ಕಂಕನಾಡಿ ಪೊಲೀಸರು ಅರೆಸ್ಟ್ ಮಾಡಲು ಹೋದಾಗ ಮಂಗಳೂರಿನ ಅಡ್ಯಾರ್ ಬಳಿ ಈ ಘಟನೆ ನಡೆದಿದೆ.

ಬಂಟ್ವಾಳದ ನಿವಾಸಿಯಾಗಿರುವ ಭವಿತ್ ರಾಜ್ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ‌ ಬೇಕಾಗಿದ್ದ ಆರೋಪಿ ,ಕೊಲೆಯತ್ನ, ಹಲ್ಲೆ ಸೇರಿ 8 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪ ಇತ ಮೇಲೆ ಇತ್ತು. ಅಲ್ಲದೆ ಮೊನ್ನೆಯಷ್ಟೇ ಗೋಕಳ್ಳ ಸಾಗಾಣಿಕೆ ನೆಪದಲ್ಲಿ ಮಾವಿನ ಹಣ್ಣಿನ ವ್ಯಾಪಾರಿ‌ ಮೇಲೂ ಹಲ್ಲೆ ನಡೆಸಿದ್ದು, ಆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ.

ರೌಡಿ ಶೀಟರ್ ಭವಿತ್ ರಾಜ್ ಮೇಲೆ ಗೋರಕ್ಷಣೆ ನೆಪದಲ್ಲಿ ಲಾರಿ ಚಾಲಕರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿದ್ದಂತೆ ಭವಿತ್ ರಾಜ್ ಮೇಲೆ ಪ್ರಕರಣ ದಾಖಲಾಗಿತ್ತುಿ.

ಖಚಿತ ಮಾಹಿತಿ ಆಧಾರದಲ್ಲಿ ಅಡ್ಯಾರ್‌ಕಟ್ಟೆ ಮೇರ್ಲಪದವಿಗೆ ಬಂಧನಕ್ಕೆ ತೆರಳಿದ್ದ ಸಂದರ್ಭದಲ್ಲಿ ರೌಡಿ ಶೀಟರ್ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ. ದಾಳಿ ವೇಳೆ ಹೆಡ್ ಕಾನ್ಸ್‌ಟೇಬಲ್ ವಿನೋದ್‌ ಗೆ ಗಾಯಗೊಂಡಿದ್ದು, ಆತ್ಮರಕ್ಷಣೆಗಾಗಿ ಕಂಕನಾಡಿ ಇನ್ಸ್ ಪೆಕ್ಟರ್ ರೌಡಿ ಶೀಟರ್ ಭವಿತ್ ರಾಜ್ ಮೇಲೆ ಫೈರಿಂಗ್ ನಡೆಸಿದ್ದಾರೆ.

ಗಾಯಗೊಂಡಿರುವ ಆರೋಪಿ ಭವಿತ್ ರಾಜ್ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಖಾಸಗಿ‌ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

10 Shares

Facebook Comments

comments