ನನ್ನ ವಿರುದ್ಧ ಸೋತವರನ್ನು ಮುಂದೆ ನಿಲ್ಲಿಸಿಕೊಂಡು ಕಾರ್ಯಕ್ರಮ ಮಾಡುತ್ತಿದ್ದೀರಿ – ಶಾಸಕ ರಘುಪತಿ ಭಟ್

ಉಡುಪಿ ಜನವರಿ 24: ಸರಕಾರಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಬ್ಯಾನರ್ ಹಾಕಲಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳಿಗೆ ಆಹ್ವಾನ ನೀಡದೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಅವರ ಎದುರೇ ಕಿಡಿಕಾರಿದ ಘಟನೆ ಇಂದು ಉಡುಪಿಯಲ್ಲಿ ನಡೆದಿದೆ.

ರಾಜ್ಯ ಸರ್ಕಾರದ ನಗರೋತ್ಥಾನ ಕಾರ್ಯಕ್ರಮದ ಉದ್ಘಾಟನೆಗೆ ಸಂಬಂಧಪಟ್ಟಂತೆ ಈ ಗಲಾಟೆ ಉಡುಪಿಯ ಕಕ್ಕುಂಜೆಯಲ್ಲಿ ನಡೆದಿದೆ
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಶಾಸಕ ರಘುಪತಿ ಭಟ್ . ಮಾಜಿಗಳು, ನನ್ನ ವಿರುದ್ಧ ಸೋತವರನ್ನು ಮುಂದೆ ನಿಲ್ಲಿಸಿಕೊಂಡು ಕಾರ್ಯಕ್ರಮ ಮಾಡುತ್ತಿದ್ದೀರಿ. ಸ್ಥಳೀಯ ಜನಪ್ರತಿನಿಧಿಗಳಿಗೂ ಆಹ್ವಾನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಕಾರ್ಯಕ್ರಮಕ್ಕೆ ಆ ಕ್ಷೇತ್ರದ ಶಾಸಕರಿಗೆ ಮಾಹಿತಿ ನೀಡುತ್ತಿಲ್ಲ. ಈ ಬಾರಿಯೂ ಹಾಗೆಯೇ ರಸ್ತೆಗಳ ಉದ್ಘಾಟನೆ ಆಗುತ್ತಿದೆ ಎಂದು ಸಚಿವೆ ಜಯಮಾಲಾರನ್ನು ಶಾಸಕ ರಘುಪತಿ ಭಟ್ ತರಾಟೆಗೆ ತೆಗೆದುಕೊಂಡರು.

35 ಕೋಟಿ ವೆಚ್ಚದ ನಗರೋತ್ಥಾನ ಅನುದಾನದ ಉದ್ಘಾಟನೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಗೂ ಆಹ್ವಾನವಿಲ್ಲ. ನಗರದೆಲ್ಲೆಡೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೆಸರಿನ ಬ್ಯಾನರ್ ಹಾಕಲಾಗಿದೆ. ಇದು ಸರ್ಕಾರಿ ಕಾರ್ಯಕ್ರಮದಂತೆ ಕಾಣಿಸುತ್ತಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿದೆ ಎಂದು ಸಚಿವೆ ವಿರುದ್ಧ ಭಟ್ ಗರಂ ಆದರು.

Facebook Comments

comments