LATEST NEWS
ವಂಚಕ ರೋಷನ್ ಸಲ್ಡಾನ ಮತ್ತೊಂದು ವಂಚನೆ ಬಯಲಿಗೆ – ಮಹಾರಾಷ್ಟ್ರ ಅಸ್ಸಾಂ ಉದ್ಯಮಿಗಳಿಗೂ ಪಂಗನಾಮ

ಮಂಗಳೂರು ಜುಲೈ 19: ಉದ್ಯಮಿಗಳಿಗೆ ಸಾಲ ಕೊಡಿಸುವ ನೇಪದಲ್ಲಿ ಹಣ ಪಡೆದು ವಂಚನೆ ಮಾಡಿದ ಆರೋಪದಲ್ಲಿ ಅರೆಸ್ಟ್ ಆಗಿರುವ ರೋಷನ್ ಸಲ್ಡಾನ ಮೇಲೆ ಇದೀಗ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ರೋಷನ್ ಸಲ್ಡಾನ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇದೀಗ ಮಂಗಳೂರಿನ ಸೆನ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ, ಮಹಾರಾಷ್ಟ್ರ ಮತ್ತು ಅಸ್ಸಾಂ ರಾಜ್ಯ ವ್ಯಕ್ತಿಯೊಬ್ಬರಿಗೂ ಇದೇ ರೋಷನ್ ಸಲ್ಡಾನ್ ವಂಚನೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ. ದಿನಾಂಕ 18 ರಂದು ಮಂಗಳೂರಿನ ಸೆನ್ ಠಾಣೆಗೆ ಆಗಮಿಸಿದ ಮಹಾರಾಷ್ಟ್ರದ ಉದ್ಯಮಿಯೊಬ್ಬರು 5 ಕೋಟಿ ಹಣವನ್ನು ರೋಷನ್ ಸಲ್ಡಾನ ನಿಗೆ ವರ್ಗಾಯಿಸಿರುವುದಾಗಿ ದೂರು ನೀಡಿದ್ದಾರೆ. ಅಲ್ಲದೆ ಅಸ್ಸಾಂ ರಾಜ್ಯದ ವ್ಯಕ್ತಿಯೊಬ್ಬರು 20 ಲಕ್ಷ ಹಣವನ್ನು ಬ್ಯಾಂಕ್ ಮೂಲಕ ವರ್ಗಾಯಿಸಿರುವುದಾಗಿ ತಿಳಿಸಿದ್ದಾರೆ.

ದೂರು ದಾಖಲಾದ ಬೆನ್ನಲ್ಲೇ ಪೊಲೀಸರು ಸಂಬಂಧಪಟ್ಟ ಬ್ಯಾಂಕ್ ಗಳಿಗೆ ಸಂಪರ್ಕಿಸಿ ಮಹಾರಾಷ್ಟ್ರದ ಉದ್ಯಮಿಗೆ ಸಂಬಂಧಿಸಿದ ರೂ 3.5 ಕೋಟಿ ಹಣ ಹಾಗೂ ಅಸ್ಸಾಂ ರಾಜ್ಯದ ವ್ಯಕ್ತಿಗೆ ಸಂಬಂಧಿಸಿದ ರೂ 20 ಲಕ್ಷ ಹಣವನ್ನು ಪ್ರೀಜ್ ಮಾಡಿದ್ದಾರೆ. ಇನ್ನು ಆರೋಪಿ ರೋಷನ್ ಸಲ್ಡಾನ ನ್ಯಾಯಾಂಗ ಬಂಧನದಲ್ಲಿದ್ದು, ಆರೋಪಿಯನ್ನು ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಗುರುವಾರ ತಡರಾತ್ರಿ ನಡೆಸಲಾದ ಮಹತ್ವದ ಕಾರ್ಯಾಚರಣೆಯಲ್ಲಿ ಉದ್ಯಮಿ ಮತ್ತು ಶ್ರೀಮಂತ ವ್ಯಕ್ತಿಗಳಿಗೆ 200 ಕೋಟಿ ರೂಪಾಯಿಗೂ ಅಧಿಕ ವಂಚನೆ ಮಾಡಿದ ಆರೋಪದಲ್ಲಿ ರೋಹನ್ ಸಲ್ಡಾನನನ್ನು ಬಂಧಿಸಲಾಗಿತ್ತು. ಇದೀಗ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದಾನೆ.