Connect with us

    FILM

    ಬಿಗ್ ಬಾಸ್ ನ 9ನೇ ಸೀಸನ್ ಗೆ ಆಯ್ಕೆಯಾದ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ

    ಬೆಂಗಳೂರು, ಸೆಪ್ಟೆಂಬರ್ 16: ಕನ್ನಡದ ಓಟಿಟಿ ಬಿಗ್ ಬಾಸ್ ನಲ್ಲಿ ತುಳುನಾಡಿನ ಸಿನಿಮಾ ನಟ ರೂಪೇಶ್ ಶೆಟ್ಟಿ ಬಿಗ್ ಬಾಸ್ ನ 9ನೇ ಸೀಸನ್ ಗೆ ಆಯ್ಕೆಯಾಗಿದ್ದಾರೆ.

    ಕಿಚ್ಚ ಸುದೀಪ್ ರವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಕನ್ನಡದ ಓಟಿಟಿ ಬಿಗ್ ಬಾಸ್ ಮುಕ್ತಾಯ ಹಂತಕ್ಕೆ ಬಂದಿದೆ. ಓಟಿಟಿ ಯಲ್ಲಿ ಆಯ್ಕೆಯಾಗುವಂತಹ ನಾಲಕ್ಕು ಆಟಗಾರರು ಟೆಲಿವಿಷನ್ ಬಿಗ್ ಬಾಸ್ ಗೆ ಆಯ್ಕೆಯಾಗುತ್ತಾರೆ.

    ಇದೀಗ ಓಟಿಟಿ ಬಿಗ್ ಬಾಸ್ ನ ಫಿನಾಲೆ ಕಾರ್ಯಕ್ರಮ ನಡೆಯುತ್ತಿದ್ದು ಟೆಲಿವಿಷನ್ ಬಿಗ್ ಬಾಸ್ ಗೆ ಆರ್ಯವರ್ಧನ್ ಗುರೂಜಿ ಮೊದಲಿಗರಾಗಿ ಆಯ್ಕೆಯಾದರೆ ಎರಡನೆಯದಾಗಿ ತುಳುನಾಡಿನ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಈ ಮೂಲಕ ರೂಪೇಶ್ ಶೆಟ್ಟಿಯವರನ್ನು ಟೆಲಿವಿಷನ್ ಬಿಗ್ ಬಾಸ್ ನಲ್ಲು ಕಾಣಬಹುದು. ಉಳಿದ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಇನ್ನೂ ಕುತೂಹಲಕಾರಿಯಾಗಿ ಮುಂದುವರಿದಿದೆ .

    Share Information
    Advertisement
    Click to comment

    You must be logged in to post a comment Login

    Leave a Reply