Connect with us

    DAKSHINA KANNADA

    ಪಕ್ಕದ ಮನೆಯ ಪ್ರಿಯಕರನ ಲವ್ವಿಡವ್ವಿ ಕಾಟ ಹೆಚ್ಚಾದಕ್ಕೆ ದರೋಡೆ ನಾಟಕ

    ಪುತ್ತೂರು ಜನವರಿ 6: ಪಕ್ಕದ ಮನೆಯಲ್ಲಿ ಇದ್ದ ಪ್ರಿಯಕರನ ಕಾಟ ತಡೆಯಲಾರದೆ ಮನೆ ಬದಲಿಸಲು ದರೋಡೆ ನಾಟಕವಾಡಿದ ಪ್ರಕರಣವನ್ನು ದಕ್ಷಿಣ ಕನ್ನಡ ಪೊಲೀಸರು ಬಯಲಿಗೆಳೆದಿದ್ದಾರೆ.


    ಉಕ್ಕುಡ ಕಾಂತಡ್ಕ ಜುಮಾ ಮಸೀದ್ ಮುಂಭಾಗದ ಬಾಡಿಗೆ ಮನೆಯಲ್ಲಿ ವಾಸವಿದ್ದ ಆಟೋ ಚಾಲಕ ರಫೀಕ್ ಮತ್ತು ಆತನ ಪುತ್ರ ಡಿಸೆಂಬರ್ 25ರಂದು ಮಧ್ಯಾಹ್ನ ನಮಾಜಿಗೆ ತೆರಳಿದ್ದ ಸಂದರ್ಭ ಮನೆಯೊಳಗೆ ನುಗ್ಗಿದ ಆಗಂತುಕ, ಕಟ್ಟಿ ಹಾಕಿ ಚಿನ್ನಾಭರಣ ದರೋಡೆ ನಡೆಸಲಾಗಿದೆ ಎಂದು ಪ್ರಕರಣ ದಾಖಲಾಗಿತ್ತು, ಈಗಾಗಲೇ ಜಿಲ್ಲೆಯಲ್ಲಿ ದರೋಡೆ ಪ್ರಕರಣಗಳನ್ನು ಹೆಚ್ಚಾದ ಹಿನ್ನಲೆ ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಆದರೆ ದರೋಡೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ತಿಳಿದಿದ್ದೆ ಬೇರೆ ಕಥೆ.


    ಮನೆಯ ಪಕ್ಕದಲ್ಲಿ ವಾಸವಿರುವ ಪ್ರಿಯಕರನ ಕಾಟ ಜೋರಾದಾಗ ಹೆದರಿದ ಜೈನಾಬಿ ಬಾಡಿಗೆ ಮನೆ ಬದಲಿಸುವ ನಿರ್ಧಾರಕ್ಕೆ ಬಂದಿದ್ದಳು. ಗಂಡ ಒಪ್ಪದಿದ್ದಾಗ, ಸತ್ಯ ವಿಷಯ ಹೇಳಲಾಗದೆ ಜೈನಾಬಿ ದರೋಡೆ ಕಥೆ ಹೆಣೆದಿದ್ದಾಳೆ. ಜೈನಾಬಿ ಕಾಲು ಮಾತ್ರ ಕಟ್ಟಿದ ಸ್ಥಿತಿಯಲ್ಲಿ ಇತ್ತು. ಕಪಾಟಿನಿಂದ ಬಟ್ಟೆಗಳನ್ನು ಸ್ವಲ್ಪ ದೂರಕ್ಕೆ ಎಸೆಯಲಾಗಿತ್ತು ಹೊರತು ಬೇರಾವ ವಸ್ತುಗಳೂ ಮಿಸುಕಾಡಿರಲಿಲ್ಲ. ಕಣ್ಣಿಗೆ ಕಾರದ ಪುಡಿ ಎರಚಲಾಗಿತ್ತು ಎಂದು ಹೇಳಿದರೂ ಆ ರೀತಿ ನಡೆದಿರಲಿಲ್ಲ. ಶ್ವಾನದಳ ಮನೆಯನ್ನು ಸುತ್ತು ಹೊಡೆದಿದ್ದು, ಅದು ಬೇರೆ ಹೋಗಿರಲಿಲ್ಲ ಮತ್ತು ಬೆರಳಚ್ಚು ತಜ್ಞರಿಗೂ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಅನುಮಾನಗೊಂಡು ಜೈನಾಬಿಯನ್ನು ವಿಚಾರಣೆ ನಡೆಸಿದಾಗ ನಿಜ ವಿಷಯ ಬಯಲಾಗಿದೆ.


    ದರೋಡೆ ದಿನ ಚಿನ್ನವನ್ನು ಮಹಿಳೆ ಮನೆಯಲ್ಲಿಯೇ ಅಡಗಿಸಿಟ್ಟಿದ್ದಳು. ಪೊಲೀಸ್ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಭಯಗೊಂಡು ತಾಯಿ ಮನೆ ಅಜ್ಜಿನಡ್ಕ ಸಮೀಪ ಎಸೆದಿದ್ದಾಳೆ. ತನಿಖೆ ನಡೆಸಿ ಭಾಗಶಃ ಚಿನ್ನ ಪತ್ತೆ ಹಚ್ಚಲಾಗಿದೆ. ದರೋಡೆ ಸುದ್ದಿಗೆ ಹೆದರಿ ಅಭದ್ರತೆ ನೆಪದಲ್ಲಿ ಇಲ್ಲಿನ ಕೆಲವು ಬಾಡಿಗೆ ಮನೆಯವರು ಮನೆ ಖಾಲಿ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply