ಪುತ್ತೂರಿನಲ್ಲಿ ಭೀಕರ ರಸ್ತೆ ಅಪಘಾತ : ಒರ್ವ ಸಾವು

ಪುತ್ತೂರು, ಜನವರಿ 22 : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಕ್ವೆಯಲ್ಲಿ ಒಮ್ನಿ ಕಾರು ಹಾಗೂ ಪಿಕ್ ಅಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಪರಿಣಾಮ ಒಮ್ನಿ ಕಾರಿನಲ್ಲಿದ್ದ ಒರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇನ್ನೋರ್ವನಿಗೆ ಗಂಭೀರವಾಗಿ ಗಾಯಗಳಾಗಿವೆ.

ಬೈಕ್ ಒಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರುಗಡೆಯಿಂದ ಬಂದ ಒಮ್ನಿಗೆ ಪಿಕ್ ಅಪ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಕೃಷ್ಣ ಭಟ್ ಸಾವನ್ನಪ್ಪಿದ್ದು , ಕೃಷ್ಣ ಭಟ್ ಮಗ ಅವಿನಾಶ್ ಭಟ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅವಿನಾಶ್ ಭಟ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಸಂಚಾರಿ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ‌.

ಎರಡು ವಾಹನಗಳ ನಡುವೆ ನಡೆದ ಅಫಘಾತದ ದೃಶ್ಯ ಸಿ.ಸಿ‌.ಕ್ಯಾಮಾರಾದಲ್ಲಿ ಸೆರೆಯಾಗಿದ್ದು, ಅಫಘಾತದ ಗಂಭೀರತೆಯನ್ನು ತಿಳಿಸುತ್ತದೆ.

ಅಪಘಾತದ ಸಿಸಿ ಟಿವಿ ದೃಶ್ಯ…

12 Shares

Facebook Comments

comments