DAKSHINA KANNADA
ಹೀಗೊಂದು ರೀತಿ ರಸ್ತೆ ಡಾಮರೀಕರಣ…!!
ಪುತ್ತೂರು ಮಾರ್ಚ್ 17: ರಸ್ತೆಗೆ ಡಾಮಾರು ಹಾಕುವಾಗ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಜಾಗವನ್ನು ಬಿಟ್ಟು ಉಳಿದ ಜಾಗಕ್ಕೆ ಮಾತ್ರ ಡಾಮಾರು ಹಾಕಿರುವ ಘಟನೆ ವಿಟ್ಲ ಪೆಟೆಯಲ್ಲಿ ನಡೆದಿದ್ದು, ಈ ಸ್ಥಳದ ಪೋಟೋ ಮತ್ತು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಟ್ಲ ಪೇಟೆಯ ರಸ್ತೆಗಳಿಗೆ ನಿನ್ನೆ ಡಾಮರೀಕರಣ ಕೆಲಸ ಪ್ರಾರಂಭವಾಗಿತ್ತು, ಈ ಮಧ್ಯೆ ಸಾಲೆತ್ತೂರು ರಸ್ತೆ ಬದಿಯಲ್ಲಿ ವ್ಯಕ್ತಿಯೋರ್ವರು ಕಾರೊಂದನ್ನು ಪಾರ್ಕ್ ಮಾಡಿ ತಮ್ಮ ಕೆಲಸಕ್ಕೆ ತೆರಳಿದ್ದರು. ಪಾರ್ಕ್ ಮಾಡಿದ ಸ್ಥಳದಲ್ಲಿ ಕಾರಿನ ಒಂದು ಬದಿ ರಸ್ತೆಗೆ ತಾಗಿಕೊಂಡಿತ್ತು.
ಈ ವೇಳೆ ಡಾಮರು ಹಾಕುತ್ತಾ ಬಂದ ಕಾರ್ಮಿಕರು ಕಾರು ನಿಲ್ಲಿಸಲಾಗಿರುವ ಸ್ಥಳಕ್ಕೆ ಡಾಮರು ಹಾಕಲಾಗದೆ, ಉಳಿದ ಜಾಗಕ್ಕೆ ಡಾಮರೀಕರಣ ಮಾಡಿದ್ದಾರೆ. ಇದರಿಂದ ಕಾರು ನಿಂತ ಸ್ಥಳ ಬಿಟ್ಟು ಉಳಿದ ಜಾಗದಲ್ಲಿ ಡಾಮಾರು ಹಾಕಲಾಗಿದೆ. ಈ ಸ್ಥಳದ ಪೋಟೋ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.