ಬೆಂಗಳೂರು ಸೆಪ್ಟೆಂಬರ್ 22: ಕಾಂತಾರಾ ಚಾಪ್ಟರ್ 1 ರ ಟ್ರೈಲರ್ ಇಂದು ರಿಲೀಸ್ ಆಗಿದೆ. ಅದರ ಬೆನ್ನಲ್ಲೇ ಫೇಕ್ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ರಿಷಬ್ ಶೆಟ್ಟಿ ಅದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.


ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಒಂದು ಫೇಕ್ ಪೋಸ್ಟರ್ ಹರಿದಾಡಿತ್ತು. ಅದರಲ್ಲಿ ಕಾಂತಾರ ಸಿನಿಮಾ ನೋಡಲು ಬರುವವರು ಮದ್ಯಪಾನ ಮಾಡಬಾರದು, ಧೂಮಪಾನ ಮಾಡಬಾರದು ಹಾಗೂ ಮಾಂಸಾಹಾರ ಸೇವಿಸಬಾರದು’ ಎಂದು ಆ ಪೋಸ್ಟರ್​​ನಲ್ಲಿ ಬರೆಯಲಾಗಿತ್ತು. ಅದು ಫೇಕ್ ಪೋಸ್ಟರ್ ಎಂದು ರಿಷಬ್ ಶೆಟ್ಟಿ ಅವರು ಸ್ಪಷ್ಟಪಡಿಸಿದ್ದಾರೆ. ‘ಊಟೋಪಚಾರಗಳನ್ನು, ಅವರವರ ಅಭ್ಯಾಸಗಳನ್ನು ಪ್ರಶ್ನಿಸೋಕೆ ಯಾರಿಗೂ ಅಧಿಕಾರ ಇರಲ್ಲ. ಅದೆಲ್ಲ ಅವರವರ ಸ್ವಂತ ವಿವೇಚನೆಗೆ ಬಿಟ್ಟಂತಹ ವಿಚಾರಗಳು. ಯಾರೋ ಫೇಕ್ ಪೋಸ್ಟರ್ ಹಾಕಿದ್ದಾರೆ. ಅದರ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಬಂದ ಕೂಡಲೇ ನಾವು ಅಲ್ಲಿಯೇ ಹೋಗಿ ಪ್ರತಿಕ್ರಿಯೆ ನೀಡುವುದು ಕಷ್ಟ ಆಗುತ್ತದೆ. ಆದರೆ ಆ ಪೋಸ್ಟರ್​ ಅನ್ನು ಅವರು ತೆಗೆದು ಹಾಕಿ ಕ್ಷಮೆ ಕೇಳಿದ್ದಾರೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ಆ ಪೋಸ್ಟರ್ ನಮ್ಮ ಪ್ರೊಡಕ್ಷನ್ ಹೌಸ್​​ಗೆ ಯಾವುದೇ ರೀತಿಯ ಸಂಬಂಧ ಇರುವಂಥದ್ದಲ್ಲ. ಅದನ್ನು ನೋಡಿದಾಗ ನಮಗೆ ಶಾಕ್ ಆಯಿತು. ನನಗೆ ಯಾರೋ ಕಳಿಸಿದರು. ನಾನು ಕೂಡಲೇ ಪ್ರೊಡಕ್ಷನ್ ಗ್ರೂಪಿನಲ್ಲಿ ಹಾಕಿದೆ. ಇದನ್ನು ಯಾರು ಮಾಡುತ್ತಿದ್ದಾರೆ? ಯಾಕೆ ಮಾಡುತ್ತಿದ್ದಾರೆ? ಜನರು ಇದರ ಬಗ್ಗೆ ಏನು ಅಂದುಕೊಳ್ಳುತ್ತಾರೆ ಅಂತ ಪ್ರಶ್ನಿಸಿದೆ’ ಎಂದಿದ್ದಾರೆ ರಿಷಬ್ ಶೆಟ್ಟಿ.

Share Information