ಉಡುಪಿ ಸೆಪ್ಟೆಂಬರ್ 23: ಕಾಂತಾರ ಚಾಪ್ಟರ್ 1 ರ ಟ್ರೈಲರ್ ಬಿಡುಗಡೆಯಾಗಿ ಈಗಾಗಲೇ ಟ್ರೆಂಡಿಂಗ್ ನಲ್ಲಿ ಇದೆ. ಇದರ ನಡುವೆ ರಿಷಬ್ ಶೆಟ್ಟಿ ಕೊಲ್ಲೂರಿಗೆ ಆಗಮಿಸಿ ಮೂಕಾಂಬಿಕೆಯ ದರ್ಶನ ಮಾಡಿದ್ದಾರೆ.


ಪತ್ನಿ ಪ್ರಗತಿ ಜೊತೆಗೆ ಕೊಲ್ಲೂರು ದೇಗುಲಕ್ಕೆ (ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಾಂತಾರ ಸಿನಿಮಾ ಯಶಸ್ಸಿಗಾಗಿ ನಟ ಪ್ರಾರ್ಥಿಸಿದ್ದಾರೆ. ಬಹುನಿರೀಕ್ಷಿತ ಕಾಂತಾರ ಚಾಪ್ಟರ್‌ 1 ಸಿನಿಮಾದ ಟ್ರೈಲರ್‌ ಅನ್ನು ನವರಾತ್ರಿ ದಿನ ಬಿಡುಗಡೆ ಮಾಡಲಾಯಿತು. ಟ್ರೈಲರ್‌ಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ.

Share Information