ಬೆಂಗಳೂರು, ಫೆಬ್ರವರಿ 26 : ಸಿಬಿಐ ಭಯಕ್ಕೆ ನಿವೃತ್ತ ಬಿಬಿಎಂಪಿ ಅಧಿಕಾರಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಕೋರಮಂಗಲದ ತಮ್ಮ ನಿವಾಸದಲ್ಲಿ ನಡೆದಿದೆ.

ಪರಮೇಶ್ವರಯ್ಯ (63) ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾರೆ. ಬಿಬಿಎಂಪಿಯ ಮಹದೇವಪುರ ವಲಯದಲ್ಲಿ ಪರಮೇಶ್ವರಯ್ಯ ಅವರು ಮುಖ್ಯ ಎಂಜಿನಿಯರ್ ಆಗಿ ನಿವೃತ್ತರಾಗಿದ್ದರು.
ಕೋರಮಂಗಲದ ನಾಲ್ಕನೇ ಬ್ಲಾಕ್ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಒಂದು ಪುಟದ ಮರಣ ಪತ್ರ ಸಿಕ್ಕಿದೆ. ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೋರಮಂಗಲ ಠಾಣೆಯ ಪೊಲೀಸರು ತಿಳಿಸಿದರು.
ನನ್ನ ಸಾವಿಗೆ ಯಾರೂ ಕಾರಣರಲ್ಲ. ನಾನೇ ಕಾರಣ. ಯಾರಿಗೂ ತೊಂದರೆ ಕೊಡಬೇಡಿ, ನನ್ನ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಬರೆದಿರುವ ಮರಣ ಪತ್ರವೊಂದು ಸಿಕ್ಕಿದೆ. ಆ ಪತ್ರವನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
2021ರಲ್ಲಿ ಬಿಬಿಎಂಪಿ ಗುತ್ತಿಗೆದಾರ ಅನಿಲ್ ಕುಮಾರ್ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಈ ವೇಳೆ ಅನಿಲ್ ಮನೆಯಲ್ಲಿದ್ದ ಸೂಟ್ಕೇಸ್ನಲ್ಲಿ ಮೂರು ಬ್ಯಾಂಕ್ ಲಾಕರ್ ಕೀಗಳು, 1.35 ಲಕ್ಷ ರೂ. ನಗದು, 275.98 ಗ್ರಾಂ ಚಿನ್ನಾಭರಣಗಳು ಪತ್ತೆಯಾಗಿದ್ದವು. ಅಲ್ಲದೆ ಅನೇಕ ಜಮೀನು ಮತ್ತು ಸೈಟ್ಗಳ ದಾಖಲಾತಿಗಳು ಸಹ ದೊರಕಿದ್ದವು. ಈ ಎಲ್ಲ ಆಸ್ತಿಗಳು ನಿವೃತ್ತ ಅಧಿಕಾರಿ ಪರಮೇಶ್ವರಯ್ಯ ಅವರಿಗೆ ಸೇರಿದ್ದು ಎಂದು ಅನಿಲ್ ಕುಮಾರ್ ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದರು.
ತನಿಖೆ ನಡೆಸಿದಾಗ, ಪರಮೇಶ್ವರಯ್ಯ ಅವರ ಆಸ್ತಿ ಮೌಲ್ಯದಲ್ಲಿ ಗಣನೀಯ ಏರಿಕೆ ಕಂಡುಬAದಿತ್ತು. 2012ರಲ್ಲಿ 29.64 ಲಕ್ಷ ರೂಪಾಯಿ ಇದ್ದ ಅವರ ಆಸ್ತಿ, 2021ರ ವೇಳೆಗೆ ಬರೋಬ್ಬರಿ 5.85 ಕೋಟಿ ರೂ.ಗೆ ಏರಿಕೆಯಾಗಿತ್ತು. ಬೆಂಗಳೂರು, ತುಮಕೂರಿನಲ್ಲಿ ನಿವೇಶನಗಳು, ಕೋರಮಂಗಲದಲ್ಲಿ ಸೈಟ್, ಮನೆ ಮತ್ತು ಅಪಾರ್ಟ್ಮೆಂಟ್ಗಳನ್ನು ಹೊಂದಿದ್ದು ಸಹ ಪತ್ತೆಯಾಗಿತ್ತು. ತನಿಖೆ ವೇಳೆ ಪರಮೇಶ್ವರಯ್ಯ ಭ್ರಷ್ಟಾಚಾರ ನಡೆಸಿರುವುದು ದೃಢಪಟ್ಟಿತ್ತು. ಇದರ ಹಿನ್ನೆಲೆಯಲ್ಲಿ, ಸಿಬಿಐನ ಎಸಿಬಿ ವಿಭಾಗದಲ್ಲಿ ಜನವರಿ 30, 2026ರಂದು ಅವರ ವಿರುದ್ಧ ಎಫ್ಐಆರ್ ದಾಖಲಿಸಿತ್ತು.