Connect with us

    LATEST NEWS

    ಒಂದು ಸಲ ಕೇವಲ 5 ಗ್ರೂಪ್ ಗೆ ಮಾತ್ರ ವ್ಯಾಟ್ಸ್ ಆ್ಯಪ್ ಫಾರ್ವರ್ಡ್ ಮೆಸೆಜ್

    ಒಂದು ಸಲ ಕೇವಲ 5 ಗ್ರೂಪ್ ಗೆ ಮಾತ್ರ ವ್ಯಾಟ್ಸ್ ಆ್ಯಪ್ ಫಾರ್ವರ್ಡ್ ಮೆಸೆಜ್

    ನವದೆಹಲಿ ಅಗಸ್ಟ್ 9: ಸಾಮಾಜಿಕ ಜಾಲತಾಣ ಹಾಗೂ ಮೆಸೇಜಿಂಗ್ ಆ್ಯಪ್ ಗಳ ಮೂಲಕ ಸುಳ್ಳು ಸುದ್ದಿ ಹರಡುವುದನ್ನು ತಡೆಗಟ್ಟಲು ಸರಕಾರ ನೀಡಿದ್ದ ಖಡಕ್ ಸೂಚನೆ ಹಿನ್ನಲೆ ಫಾರ್ವರ್ಡೆಡ್ ಸಂದೇಶಗಳ ಮೇಲೆ ವ್ಯಾಟ್ಸ್ ಆ್ಯಪ್ ಸಂಸ್ಥೆ ಮಿತಿ ಹೇರಿದೆ.

    ಬುಧವಾರದಿಂದ ಬಳಕೆದಾರರು ಒಂದು ಬಾರಿಗೆ ಕೇವಲ 5 ಜನರು ಅಥವಾ ಗ್ರೂಫ್ ಗೆ ಮಾತ್ರ ಸಂದೇಶಗಳನ್ನು ಫಾರ್ವರ್ಡ್ ಮಾಡಲು ಅವಕಾಶವಿದೆ. ವ್ಯಾಟ್ಸ್ ಆಪ್ ನ ಮಾಲೀಕತ್ವ ಹೊಂದಿರುವ ಫೇಸ್ ಬುಕ್ ಕಳೆದ ತಿಂಗಳು ಫಾರ್ವರ್ಡ್ ಮೆಸೇಜ್ ಗಳಿಗೆ ನಿರ್ಬಂಧ ಹೇರಿಕೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು.

    ಬುಧವಾರದಿಂದ ಭಾರತದಲ್ಲಿ ವ್ಯಾಟ್ಸ್ ಆಪ್ ನ ಎಲ್ಲ ಬಳಕೆದಾರರಿಗೂ ಫಾರ್ವರ್ಡ್ ಮಿತಿ ಹೇರಲಾಗಿದೆ ಎಂದು ಕಂಪೆನಿ ಪ್ರಕಟನೆ ತಿಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply