ದೆಹಲಿ ಡಿಸೆಂಬರ್ 05: ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪೈಲೆಟ್ ಗಳ ರಜೆ ವಿಚಾರ ಹಾಗೂ ರಾತ್ರಿ ವೇಳೆ ಸಂಚಾರಕ್ಕೆ ಸಂಬಂಧಿಸಿದಂತೆ ಡಿಜಿಸಿಎ ಹೊರಡಿಸಿರುವ ಹೊಸ ನಿಯಮಗಳನ್ನು ತಾತ್ಕಾಲಿಕವಾಗಿ ಹಿಂದೆಗೆದುಕೊಂಡಿದೆ.


ಡಿಜಿಸಿಎ ಯ ಹೊಸ ನಿಯಮಗಳಿಂದಾಗಿ ದೇಶದ ಪ್ರಮುಖ ವಿಮಾನಯಾನ ಸಂಸ್ಥೆಇಂಡಿಗೋದಲ್ಲಿ ಸಂಚಾರದಲ್ಲಿ ಉಂಟಾದ ಸಮಸ್ಯೆಗಳಿಂದ ಇಡೀ ದೇಶದಲ್ಲಿ ಕೋಲಾಹಲ ಎದ್ದಿತ್ತು, ಹೊಸ ನಿಯಮಗಳನ್ನು ಪಾಲಿಸಲು ಮುಂದಾದ ಇಂಡಿಗೋ ಗೆ ಪೈಲೆಟ್ ಗಳ ಕೊರತೆ ಉಂಟಾದ ಹಿನ್ನಲೆ ಹಲವು ವಿಮಾನಗಳ ಕಾರ್ಯಾಚರಣೆಯನ್ನು ನಿಲ್ಲಿಸಿತ್ತು, ಇದರಿಂದಾಗಿ ಲಕ್ಷಾಂತರ ಪ್ರಯಾಣಿಕರು ಸಂಕಷ್ಟ ಎದುರಿಸಿದ್ದರು. ಕಳೆದ ಎರಡು ದಿನಗಳಿಂದ ಸುಮಾರು 1500ಕ್ಕೂ ಅಧಿಕ ವಿಮಾನಗಳು ಸಂಚಾರವನ್ನು ನಿಲ್ಲಿಸಿದೆ. ಇಡೀ ದೇಶದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾದ ಹಿನ್ನಲೆ ಇದೀಗ ವಿಮಾನಯಾನ ನಿಯಂತ್ರಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರ ವಿಮಾನಯಾನ ಸಂಸ್ಥೆಗೆ ಪೈಲಟ್‌ಗಳಿಗೆ ಹೊಸ ವಿಮಾನ ಕರ್ತವ್ಯ ಸಮಯ ಮಿತಿ (ಎಫ್‌ಡಿಟಿಎಲ್) ಮಾನದಂಡಗಳಲ್ಲಿ ಕೆಲವು ರಾತ್ರಿ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಬದಲಾವಣೆಗಳಿಂದ ತಾತ್ಕಾಲಿಕ ಒಂದು ಬಾರಿ ವಿನಾಯಿತಿ ನೀಡಿದೆ.

ಒಂದು ಬಾರಿ ವಿನಾಯಿತಿಗಳ ಕುರಿತು ಡಿಜಿಸಿಎ ಆದೇಶವು, ಕಾರ್ಯಾಚರಣೆಯ ಸ್ಥಿರೀಕರಣವನ್ನು ಸುಗಮಗೊಳಿಸಲು ಮಾತ್ರ ಅವುಗಳನ್ನು ನೀಡಲಾಗುತ್ತಿದೆ ಮತ್ತು ಸುರಕ್ಷತಾ ಅವಶ್ಯಕತೆಗಳನ್ನು ದುರ್ಬಲಗೊಳಿಸುವಂತೆ ಅರ್ಥೈಸಿಕೊಳ್ಳಬಾರದು ಎಂದು ಹೇಳಿದೆ.

Share Information