Connect with us

    LATEST NEWS

    ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ್ದ ರೆಹನಾ ಫಾತಿಮಾಳನ್ನು ಮನೆಗೆ ಕಳುಹಿಸಿದ ಬಿಎಸ್ಎನ್ಎಲ್

    ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ್ದ ರೆಹನಾ ಫಾತಿಮಾಳನ್ನು ಮನೆಗೆ ಕಳುಹಿಸಿದ ಬಿಎಸ್ಎನ್ಎಲ್

    ಕೇರಳ: ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯ ಪ್ರವೇಶ ಮಾಡಲು ಯತ್ನಿಸಿ ದೊಡ್ಡ ಸುದ್ದಿ ಮಾಡಿದ್ದ ರೆಹಾನಾ ಫಾತಿಮಾ ಅವರನ್ನು ಬಿಎಸ್ ಎನ್ ಎಲ್ ಮನೆ ಕಳುಹಿಸಿದೆ. ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಪೋಸ್ಟ್ ಗಳನ್ನು ಮಾಡುತ್ತಾ ಸದಾ ಸುದ್ದಿಯಲ್ಲಿರುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ಫಾತಿಮಾ ಈಗ ಮನೆ ದಾರಿ ಹಿಡಿಯುವಂತೆ ಆಗಿದೆ.

    ಬಿಎಸ್ಎನ್ಎಲ್ ನ ಟೆಕ್ನಿಕಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಫಾತಿಮಾ ಧಾರ್ಮಿಕ ನಂಬಿಕೆಗೆ ಧಕ್ಕೆ ತರುತ್ತಿದ್ದಾರೆ ಎಂದು ಬಿಎಸ್ಎನ್ಎಲ್ ಗೆ ನಿರಂತರ ದೂರುಗಳು ಬಂದಿದ್ದವು. ಅದರ ನಡುವೆ ಶಬರಿಮಲೆ ದೇಗುಲವನ್ನು ಪ್ರವೇಶಿಸಲು ಯತ್ನವನ್ನು ಆಕೆ ನಡೆಸಿದ್ದರು. ಈ ಎಲ್ಲಾ ಕಾರಣಕ್ಕೆ ಬಿಎಸ್ಎನ್ಎಲ್ ತಮ್ಮ ಗ್ರಾಹಕರ ದೃಷ್ಟಿಯಲ್ಲಿ ಫಾತಿಮಾ ಅವರ ಕೆಲಸಗಳು ಸಂಸ್ಥೆಯ ಗೌರವಕ್ಕೆ ಧಕ್ಕೆ ತಂದಿದೆ ಎಂಬ ಕಾರಣ ನೀಡಿ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಆಕೆಗೆ ಸೂಚಿಸಲಾಗಿದೆ.

    ಆಕೆಯ ಕೃತ್ಯ ಅಶಿಸ್ತಿಗೆ ಸಮನಾಗಿದೆ ಹಾಗೂ ಅನುಚಿತ ವರ್ತನೆಯಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಆಕೆಯ ಉದ್ದೇಶಪೂರಿತ ಕೃತ್ಯವು ಕಂಪೆನಿಯ ಗೌರವಕ್ಕೆ ಚ್ಯುತಿ ತಂದಿದೆ ಎಂದೂ ಬಿಎಸ್ಸೆನ್ನೆಲ್ ಹೇಳಿದೆ.

    ನವೆಂಬರ್ 2018ರಲ್ಲಿ ಫಾತಿಮಾ ಅವರ ಹಸಿಬಿಸಿ ಫೇಸ್ ಬುಕ್ ಪೋಸ್ಟ್ ಗಳ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗಿತ್ತು, ಅಲ್ಲದೆ ಆಕೆಯ ಬಂಧನದ ಬೆನ್ನಲ್ಲೇ ಸೇವೆಯಿಂದ ವಜಾಗೊಳಿಸಲಾಗಿತ್ತು. ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿ ಟೆಕ್ನಿಷಿಯನ್ ಆಗಿ ದುಡಿಯುತ್ತಿದ್ದ ಫಾತಿಮಾ ಸಂಸ್ಥೆಯ ಆದೇಶದ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಯತ್ನಿಸುವುದಾಗಿ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply