LATEST NEWS
ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಟಿಕೆಟ್ – ಸ್ಪೋಟಗೊಂಡ ಬಿಜೆಪಿ ಭಿನ್ನಮತ – ಪದಾಧಿಕಾರಿಗಳ ರಾಜಿನಾಮೆ
ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಟಿಕೆಟ್ – ಸ್ಪೋಟಗೊಂಡ ಬಿಜೆಪಿ ಭಿನ್ನಮತ – ಪದಾಧಿಕಾರಿಗಳ ರಾಜಿನಾಮೆ
ಉಡುಪಿ ಎಪ್ರಿಲ್ 10: ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕುಂದಾಪುರ ಕ್ಷೇತ್ರದಿಂದ ಸ್ಪರ್ಧೆಗೆ ಟಿಕೇಟ್ ಘೋಷಣೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ.
ಈ ಹಿಂದೆ ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರರಾಗಿ ನಿಂತು ಗೆಲವು ಸಾಧಿಸಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಇತ್ತೀಚೆಗೆ ಮತ್ತೆ ಬಿಜೆಪಿ ಸೇರ್ಪಡೆಗೊಂಡಿದ್ದರು. ಇತ್ತೀಚೆಗೆ ಬಿಜೆಪಿ ಪ್ರಕಟಿಸಿದ ಚುನಾವಣಾ ಅಭ್ಯರ್ಥಿಗಳ ಪ್ರಥಮ ಪಟ್ಟಿಯಲ್ಲಿ ಹಾಲಾಡಿ ಅವರಿಗೆ ಕುಂದಾಪುರದಿಂದ ಸ್ಪರ್ಧೆಗೆ ಹಸಿರು ನಿಶಾನೆ ನೀಡಿತ್ತು. ಈಗ ಹಾಲಡಿ ಶ್ರೀನಿವಾಸ ಶೆಟ್ಟಿ ವಿರುದ್ಧ ಮೂಲ ಬಿಜೆಪಿಗರು ತಿರುಗಿ ಬಿದ್ದಿದ್ದಾರೆ. ಬೂದಿ ಮುಚ್ಚಿದ ಕೆಂಡದಂತೆ ಇದ್ದ ಹಾಲಾಡಿ ವಿರುದ್ಧದ ಅಸಮದಾನ ಸ್ಪೋಟ ಗೊಂಡಿದೆ.
ಕುಂದಾಪುರ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದ ಕಾರಣ ಏಳು ಜನ ಪದಾಧಿಕಾರಿಗಳು ರಾಜಿನಾಮೆ ನೀಡಿದ್ದಾರೆ. ಬಿಜೆಪಿ ಮೊದಲ ಪಟ್ಟಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಟಿಕೇಟ್ ಘೊಷಣೆಯಾಗಿದ್ದು, ಬಿಜೆಪಿಯ ಮೂಲ ಕಾರ್ಯಕರ್ತರಿಗೆ ಅಸಮದಾನ ಉಂಟುಮಾಡಿದೆ. ಕಳೆದ ಬಾರಿಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಸೇರಿದಂತೆ ಏಳು ಪದಾಧಿಕಾರಿಗಳು ರಾಜಿನಾಮೆಯನ್ನು ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆಗೆ ಸಲ್ಲಿಸಿದ್ದಾರೆ.
ರಾಜಿನಾಮೆ ನೀಡಿದ ಪದಾಧಿಕಾರಿಗಳು ಹಾಲಾಡಿ ವಿರುದ್ಧ ಕೆಲಸ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಯಡಿಯೂರಪ್ಪ ಹಾಗೂ ಶೋಭ ವಿರುದ್ಧ ಕಾರ್ಯಕರ್ತರು ಕಿಡಿಕಾರಿದ್ದಾರೆ. ಬಿಜೆಪಿಯಲ್ಲಿ ಪಕ್ಷ ತೊರೆದು ಬಂದವರಿಗೆ ಮಾತ್ರ ಅವಕಾಶ ಸ್ಥಾನಮಾನದ ಹುದ್ದೆ ಸಿಗುತ್ತೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
You must be logged in to post a comment Login