ಇತ್ತೀಚೆಗಷ್ಟೇ ಹಸೆಮಣೆ ಎರಿದ್ದ ಸಿನೆಮಾ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೀಗ, ಕಾರ್ಟೂನ್ ಆಧಾರಿತ ವಿಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ರಶ್ಮಿಕಾ ಮಂದಣ್ಣ , ‘ನಾವೀಗ ಇಬ್ಬರಲ್ಲ.. ಮೂವರು’ ಎಂದು ಬರೆದುಕೊಂಡಿದ್ದಾರೆ. ಸದ್ಯ, ಇವರ ಪೋಸ್ಟ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಕಳೆದ ಫೆಬ್ರುವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದರ ಬೆನ್ನಲೇ, ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ‘ವಿರೋಶ್’ ಜೋಡಿ ಫೆಬ್ರುವರಿ 26ರಂದು ಉದಯಪುರದ ಐಟಿಸಿ ಮೆಮೆಂಟೋಸ್ನಲ್ಲಿ ಅದ್ದೂರಿಯಾಗಿ ಮದುವೆ ಆಗಿದ್ದರು.. ಮಾರ್ಚ್ 4ರಂದು ಹೈದರಾಬಾದ್ನ ಐಷಾರಾಮಿ ಹೋಟೆಲ್ನಲ್ಲಿ ಆರತಕ್ಷತೆ ಆಯೋಜಿಸಲಾಗಿತ್ತು.
ವಿಡಿಯೋದಲ್ಲಿ ರಶ್ಮಿಕಾ ಮತ್ತು ವಿಜಯ್ ಅವರ ಅನಿಮೇಟೆಡ್ ಚಿತ್ರದೊಂದಿಗೆ ಸೂರ್ಯಕಾಂತಿಯ ಚಿತ್ರವೂ ಇದ್ದು, ರಶ್ಮಿಕಾ ಅವರ ಟಿ-ಶರ್ಟ್ನಲ್ಲಿ ಒಂದು ಮೊಟ್ಟೆಯ ಚಿತ್ರವೂ ಇದೆ. ಇನ್ನು ವಿಡಿಯೋ ನೋಡಿದವರು ನಾನಾ ಕಲ್ಪನೆಗಳನ್ನು ಮಾಡಿಕೊಳ್ಳುತ್ತಿದ್ದು, ಕೆಲವರಂತೂ ರಶ್ಮಿಕಾ ಮಂದಣ್ಣ ಗರ್ಭಿಣಿಯಾಗಿದ್ದಾರೆ ಮತ್ತು ಶೀಘ್ರದಲ್ಲೇ ತಾಯಿಯಾಗುತ್ತಾರೆಂದು ಹೇಳುತ್ತಿದ್ದಾರೆ. ಆದರೆ, ಅಸಲಿ ಸುದ್ದಿ ಬೇರೆಯೇ ಇದೆ.
ರಶ್ಮಿಕಾ ಹೊಸ ಅನಿಮೇಟೆಡ್ ಪಾತ್ರ ಸೂರ್ಯಕಾಂತಿಯನ್ನು ತಮ್ಮ ಆಪ್ತ ಸ್ನೇಹಿತೆಯೆಂದು ಪರಿಗಣಿಸುತ್ತಾರೆ. ಅದಕ್ಕಾಗಿ ಅವರು ಈ ಪಾತ್ರಕ್ಕೆ ವಿಶೇಷ ಖಾತೆ ರಚಿಸಿದ್ದಾರೆ. ಆ ಖಾತೆಯಲ್ಲಿ ಹೂವಿನೊಂದಿಗೆ ತಮ್ಮ ಸಿಹಿ ಕ್ಷಣಗಳು, ಕಥೆಗಳು, ಅನಿಮೇಟೆಡ್ ಫೋಟೋಗಳು ಮತ್ತು ವಿಡಿಯೋಗಳ ಮೂಲಕ ಹಂಚಿಕೊಳ್ಳುತ್ತಾರೆ. ಈಗ, ವಿಜಯ್ ಅವರನ್ನು ಈ ಅನಿಮೇಷನ್ ಜಗತ್ತಿಗೆ ಆಹ್ವಾನಿಸುವ ಮೂಲಕ, “ನಾವೀಗ ಮೂವರು” ಎಂದು ಹೇಳಿದ್ದಾರೆ.
ಇನ್ನು ರಶ್ಮಿಕಾ ಮತ್ತು ರೂ (Rashmika & Ru) ಎಂಬುದು ‘ಟೆರಿಬ್ಲಿ ಟೈನಿ ಟೇಲ್ಸ್’ (TTT) ಸಂಸ್ಥೆಯು ನಟಿ ರಶ್ಮಿಕಾ ಮಂದಣ್ಣ ಅವರ ಜೊತೆಗೂಡಿ ಸಿದ್ಧಪಡಿಸಿದ ಒಂದು ವಿಶೇಷ ಸರಣಿ.
ಈ ‘ರೂ (Ru)’ ಎಂಬ ಪಾತ್ರವು ರಶ್ಮಿಕಾ ಮಂದಣ್ಣ ಅವರ ನೈಜ ಗುಣಲಕ್ಷಣಗಳಿಂದ ಪ್ರೇರಿತವಾಗಿದೆ. ಈ ಪಾತ್ರ ಜನರ ಜೀವನದಲ್ಲಿ ಸಂತೋಷ, ಪ್ರೀತಿ ಮತ್ತು ಸಕಾರಾತ್ಮಕತೆ ಹರಡುವುದನ್ನು ಉದ್ದೇಶಿಸಿದೆ. ‘ರೂ’ ಸರಳವಾಗಿ ಹೇಳುವುದಾದರೆ, ರಶ್ಮಿಕಾ ಅವರ ಹಸನ್ಮುಖಿ, ದಯಾಳು ವ್ಯಕ್ತಿತ್ವದ ಪ್ರತಿಬಿಂಬವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಜನರಿಗೆ ನೆಮ್ಮದಿ ಮತ್ತು ನಗು ನೀಡುವ ಒಂದು ಪುಟ್ಟ ಪ್ರಯತ್ನವಾಗಿದೆ.