ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಮದುವೆ ಇದೀಗ ಕನ್ಪರ್ಮ್ ಆಗಿದೆ. ಅತಿಥಿಗಳಿಗೆ ನೀಡಲಾದ ಅವರ ವಿವಾಹ ಕಾರ್ಡ್ ಈಗ ಸಖತ್ ವೈರಲ್ ಆಗಿದೆ.


ಇದೇ ಫೆಬ್ರವರಿ 26 ರಂದು ವಿಜಯ್ – ರಶ್ಮಿಕಾ ಮಂದಣ್ಣ (Rashmika Mandanna) ವಿವಾಹವಾಗುತ್ತಿದ್ದು, ಮಾರ್ಚ್ 4 ರಂದು ಬಂಜಾರ ಹಿಲ್ಸ್‌ನಲ್ಲಿರುವ ತಾಜ್ ಕೃಷ್ಣಾ (Taj Krishna) ಪ್ಯಾಲೆಸ್‌ನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದ ಗುರು ಹಿರಿಯರ ಸಮ್ಮುಖದಲ್ಲಿ ವಿಜಯ್‌ – ರಶ್ಮಿಕಾ ವಿವಾಹವಾಗಲಿದ್ದಾರೆ. ಈ ವಿಷಯ ಅವರ ಅಭಿಮಾನಿಗಳಿಗೆ ಸಖತ್‌ ಖುಷಿ ಕೊಟ್ಟಿದೆ.

ರಶ್ಮಿಕಾ ಹಾಗೂ ವಿಜಯದೇವರಕೊಂಡ ಕಳೆದ ಕೆಲ ವರ್ಷಗಳಿಂದ ಒಟ್ಟಿಗೆ ಸುತ್ತಾಡುತ್ತಿದ್ದರೂ ಒಬ್ಬರಿಗೊಬ್ಬರು ಗುಟ್ಟುಬಿಟ್ಟುಕೊಟ್ಟಿರಲಿಲ್ಲ. ಕಳೆದ ಅಕ್ಟೋಬರ್‌ನಲ್ಲಿ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಬಳಿಕ ಫೆಬ್ರವರಿ 2 ರಂದು ಉದಯಪುರದಲ್ಲಿ ವಿವಾಹವಾಗಲಿದ್ದಾರೆ ಎಂದೆಲ್ಲಾ ಸುದ್ದಿ ಹರಿದಾಡುತ್ತಿತ್ತು. ಸದ್ಯ ವೆಡ್ಡಿಂಗ್‌ ಕಾರ್ಡ್‌ ವೈರಲ್‌ ಆಗಿದ್ದು, ವದಂತಿಗಳಿಗೆ ತೆರೆ ಬಿದ್ದಿದೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಮದುವೆಗೆ ಅತಿಥಿಗಳನ್ನ ಆಹ್ವಾನಿಸುತ್ತಿದ್ದಾರೆ. ಈ ರೀತಿ ಆಹ್ವಾನ ನೀಡಿದವರ ಪೈಕಿ ಒಬ್ಬರು ಮದುವೆ ಆಮಂತ್ರಣ ಪತ್ರಿಕೆಯನ್ನ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿವಾಹ ಆಮಂತ್ರಣ ಬಾಕ್ಸ್ ನಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಎಂದು ಬರೆದಿದೆ. ಆಮಂತ್ರಣ ಪತ್ರದಲ್ಲಿ ಮದುವೆ ಫೆಬ್ರವರಿ 26 ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ. ಉದಯಪುರ ಪ್ಯಾಲೆಸ್‌ನಲ್ಲಿ ಮದ್ವೆ ನಡೆಯುತ್ತಿದೆ ಎನ್ನಲಾದ್ರೂ ಪತ್ರಿಕೆಯಲ್ಲಿ ಮದುವೆಯ ಸ್ಥಳ ಬಹಿರಂಗಪಡಿಸಿಲ್ಲ.

Share Information