Connect with us

BELTHANGADI

ಬೀಡಿ ನೋಡುವ ನೆಪದಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ

ಬೀಡಿ ನೋಡುವ ನೆಪದಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ

ಬೆಳ್ತಂಗಡಿ, ಸೆಪ್ಟಂಬರ್ 10: ಬೀಡಿ ತೆಗೆಯುವ ನೆಪದಲ್ಲಿ ಯುವತಿಯೋರ್ವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಸುರುಳಿ ಎಂಬಲ್ಲಿ ನಡೆದಿದೆ.

ಎಂದಿನಂತೆ ದಲಿತ ಯುವತಿಯು ಬೀಡಿಯನ್ನು ಸಲೀಂ ಎಂಬಾತನ ಬೀಡಿ ಬ್ರ್ಯಾಂಚ್ ಗೆ ತೆರಳಿದ ಸಂದರ್ಭದಲ್ಲಿ ಸಲೀಂ ಬೀಡಿ ನೋಡುವ ನೆಪದಲ್ಲಿ ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಸಲೀಂ ನ ಈ ಕೃತ್ಯವನ್ನು ವಿರೋಧಿಸಿ ಯುವತಿ ಕಿರುಚಿದ್ದು, ಸ್ಥಳದಲ್ಲೇ ಇದ್ದ ಹಿಂದೂ ಸಂಘಟನೆಯ ಯುವಕರು ಯುವತಿಯನ್ನು ಆರೋಪಿಯಿಂದ ರಕ್ಷಿಸಿದ್ದಾರೆ.

ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಸಲೀಂ ನನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಬಳಿಕ ಬೆಳ್ತಂಗಡಿ ಪೋಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Facebook Comments

comments