LATEST NEWS
7 ತಿಂಗಳ ಗರ್ಭಿಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಆರೋಪಿಗೆ ಮರಣದಂಡನೆ ಶಿಕ್ಷೆ
7 ತಿಂಗಳ ಗರ್ಭಿಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಆರೋಪಿಗೆ ಮರಣದಂಡನೆ ಶಿಕ್ಷೆ
ಉಡುಪಿ ಫೆಬ್ರವರಿ 20: ಕುಂದಾಪುರ ಗರ್ಭಿಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಶಾಂತ್ ಗೆ ಮರಣ ದಂಡನೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಅವರು ಈ ಶಿಕ್ಷೆ ನೀಡಿದ್ದಾರೆ. ಮರಣದಂಡನೆ ಶಿಕ್ಷೆ ನೀಡಿದ ಬಳಿಕ ಶಿಕ್ಷೆ ಬರೆಯಲು ಬಳಸಿದ ಪೆನ್ನನ್ನು ನ್ಯಾಯಾಧಿಶರು ಹೊರಗೆ ಬಿಸಾಡಿದರು.
ಇದೊಂದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದ್ದು ಈ ಪ್ರಕರಣದಲ್ಲಿ ಏಳು ತಿಂಗಳ ಗರ್ಭಿಣಿ ಮೆಲೆ ಅತ್ಯಾಚಾರವಾಗಿ ಕೊಲೆಯಾಗಿದೆ, ಅಲ್ಲದೇ ಸಂತ್ರಸ್ಥೆಯ ಹೊಟ್ಟೆಯಲ್ಲಿದ್ದ ಭ್ರೂಣದ ಹತ್ಯೆ ಕೂಡಾ ಆಗಿದೆ ಎಂದರು. ಈ ಹಿನ್ನಲೆಯಲ್ಲಿ ಆರೋಪಿಗೆ ಮರಣ ದಂಡನೆ ವಿಧಿಸಿದಲ್ಲಿ ಮಾತ್ರ ಮೃತಳ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂದು ಶಿಕ್ಷೆ ಪ್ರಕಟಿಸುವ ವೇಳೆ ನ್ಯಾಯಾಧೀಶರು ಹೇಳಿದರು.
ಈ ಪ್ರಕರಣದಲ್ಲಿ ಸರಕಾರಿ ಪರ ವಿಶೇಷ ಅಭಿಯೋಜಕರಾಗಿ ರವಿ ಕಿರಣ್ ಮುರ್ಡೇಶ್ವರ ಅವರು ವಾದಿಸಿದ್ದರು.
ಪ್ರಕರಣದ ಹಿನ್ನಲೆ
2015 ರ ಏಪ್ರಿಲ್ ನಲ್ಲಿ ಕುಂದಾಪುರದ ಗೋಪಾಡಿಯಲ್ಲಿ ಈ ಘಟನೆ ನಡೆದಿತ್ತು, ಮನೆಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪಿ ಪ್ರಶಾಂತ್ 7 ತಿಂಗಳ ಗರ್ಭೀಣಿ ಇಂದಿರಾ ಅವರನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ. ಪ್ರಕರಣದ ವಿಚಾರಣೆ ನಡೆಸಿದ್ದ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
You must be logged in to post a comment Login