ಬೆಂಗಳೂರು – ಬಿಗ್ ಬಾಸ್ ಸೀಸನ್ 12 ರಲ್ಲಿ ಭಾಗವಹಿಸಿ ರನರ್ ಆಪ್ ಆಗಿ ಹೊರ ಬಂದ ರಕ್ಷಿತಾ ಇದೀಗ ಇಡೀ ಕರ್ನಾಟಕದಲ್ಲಿ ಮನೆ ಮಾತಾಗಿದ್ದಾಳೆ. ಮೊದಲು ಯುಟ್ಯೂಪಬ್ ವಿಡಿಯೋಗಳಿಂದಾಗಿ ಕರಾವಳಿಯಲ್ಲಿ ಟ್ರೋಲ್ ಆಗುತ್ತಿದ್ದ ರಕ್ಷಿತಾ ಇದೀಗ ಸೆಲೆಬ್ರೆಟಿ . ಬಿಗ್ ಬಾಸ್ ರಕ್ಷಿತಾ ಜೀವನವನ್ನೆ ಬದಲಾಯಿಸಿದೆ. ಇದೀಗ ರಕ್ಷಿತಾ ಶೆಟ್ಟಿ ಕಿಚ್ಚ ಸುದೀಪ್ ಅವರಿಗೆ ಒಂದು ಪತ್ರವನ್ನು ಬರೆದಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ಮಾಡಿರುವ ಅವರು ಪತ್ರವನ್ನು ಸುದೀಪ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ರಕ್ಷಿತಾ ಶೆಟ್ಟಿ ಪೋಸ್ಟ್ನಲ್ಲಿ ಏನಿದೆ?
‘ಕೆಲವರು ನಿಮಗೆ ಮಾರ್ಗದರ್ಶನ ನೀಡುವುದಷ್ಟೇ ಅಲ್ಲ.. ಇಡೀ ಜಗತ್ತು ನಿಮ್ಮನ್ನು ಪ್ರಶ್ನಿಸಿದಾಗ ಅವರು ನಿಮ್ಮೊಂದಿಗೆ ನಿಲ್ಲುತ್ತಾರೆ. ಸುದೀಪ್ ಸರ್.. ಈ ಬಿಗ್ಬಾಸ್ ಪ್ರಯಾಣದುದ್ದಕ್ಕೂ ನೀವು ನನಗೆ ತಂದೆಯಂತೆ ಇದ್ದಿರಿ. ನಾನು ಸರಿಯಾಗಿದ್ದಾಗ, ನೀವು ಕೋಟ್ಯಂತರ ಜನರ ಮುಂದೆ ನನ್ನ ಪರವಾಗಿ ಮಾತನಾಡಿದ್ದೀರಿ. ನಾನು ಏನಾದರೂ ಒಳ್ಳೆಯದನ್ನು ಮಾಡಿದಾಗ, ನೀವು ಹೆಮ್ಮೆಯಿಂದ ನನ್ನನ್ನು ಪ್ರೋತ್ಸಾಹಿಸಿದ್ದೀರಿ. ನಾನು ತಪ್ಪುಗಳನ್ನು ಮಾಡಿದಾಗ, ನೀವು ನಿಜವಾದ ಹಿತೈಷಿಯಂತೆ ನನ್ನನ್ನು ಸರಿಪಡಿಸಿದ್ದೀರಿ. ಪ್ರಾಮಾಣಿಕವಾಗಿ, ಕಟ್ಟುನಿಟ್ಟಾಗಿ, ಆದರೆ ತುಂಬಾ ಎಚ್ಚರಿಕೆಯಿಂದ ಅದನ್ನು ನಿಭಾಯಿಸಿದ್ದೀರಿ. ನನ್ನನ್ನು ನೋಡಿ ಸತ್ಯ ಹೇಳಿದವರು ನೀವು, ‘ರಕ್ಷಿತಾ, ನೀವು ಇದಕ್ಕಿಂತ ಬಲಶಾಲಿ ಎಂದು ಎಂದು ಧೈರ್ಯ ತುಂಬಿದಿರಿ. ಆ ಪ್ರಾಮಾಣಿಕತೆ, ಮಾರ್ಗದರ್ಶನವೇ ನನ್ನನ್ನು ಬದಲಾಯಿಸಿತು’.
‘ಬಿಗ್ಬಾಸ್ನ ಮೊದಲ ರನ್ನರ್-ಅಪ್ ಆಗುವುದು ನನ್ನ ಸಾಧನೆ ಮಾತ್ರವಲ್ಲ. ಅದು ನಿಮ್ಮ ಪ್ರಯತ್ನ, ನಿಮ್ಮ ಬೆಂಬಲ ಮತ್ತು ನೀವು ನನ್ನ ಮೇಲಿಟ್ಟ ನಂಬಿಕೆ. ನಾನು ಇಂದು ಇಲ್ಲಿ ನಿಂತಿದ್ದೇನೆ ಎಂದರೆ ಅದಕ್ಕೆ ನೀವೇ ಕಾರಣ. ನನ್ನನ್ನು ರಕ್ಷಿಸಿದ್ದಕ್ಕೆ, ಬೆಂಬಲಿಸಿದ್ದಕ್ಕೆ, ತಂದೆಯಂತೆ ನನ್ನ ಬಗ್ಗೆ ಕಾಳಜಿ ವಹಿಸಿದಕ್ಕೆ ಧನ್ಯವಾದಗಳು ಸರ್. ನೀವು ನನಗಾಗಿ ಮಾತನಾಡಿದ್ದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನೀವು ಕೊಟ್ಟ ಪ್ರೀತಿಯನ್ನು ನಾನು ನನ್ನ ಹೃದಯದಲ್ಲಿ ಹೊತ್ತು ಸಾಗುತ್ತೇನೆ’ ಎಂದು ಬರೆದುಕೊಂಡಿದ್ದಾರೆ.