ಬೆಂಗಳೂರು – ಬಿಗ್ ಬಾಸ್ ಸೀಸನ್ ಮುಗಿಯಲು ಇನ್ನೇನು ಕೆಲವೆ ದಿನಗಳು ಬಾಕಿ ಇದೆ. ಕಳೆದ ವಾರ ನಡೆಯದ ಕಿಚ್ಚನ ಪಂಚಾಯ್ತಿನ ಈ ವಾರ ನಡೆದಿದ್ದು, ಗಿಲ್ಲಿ ಆಟದ ವೈಖರಿಯನ್ನು ಸುದೀಪ್ ಹಾಡಿ ಹೊಗಳಿದ್ದಾರೆ..ಈ ಹಿಂದೆ ಪ್ರಥಮ್ ಮತ್ತು ಹನುಮಂತ ಅವರು ‘ಬಿಗ್ ಬಾಸ್’ ಟ್ರೋಫಿ ಗೆದ್ದಿದ್ದರು. ಈಗ ಗಿಲ್ಲಿ ನಟ ಆಡುತ್ತಿರುವ ಆಟದಲ್ಲಿ ಕೂಡ ಪ್ರಥಮ್ ಮತ್ತು ಹನುಮಂತ ಅವರ ಛಾಯೆ ಕಾಣುತ್ತಿದೆ. ಅದನ್ನು ಕಿಚ್ಚ ಸುದೀಪ್ ಅವರು ಗಮನಿಸಿದ್ದಾರೆ. ‘ಗಿಲ್ಲಿ ನಟ ಬಿಗ್ ಬಾಸ್ ಅರ್ಥ ಮಾಡಿಕೊಂಡಷ್ಟು ಚೆನ್ನಾಗಿ ಬೇರೆ ಯಾರೂ ಅರ್ಥ ಮಾಡಿಕೊಂಡಿಲ್ಲ’ ಎಂದು ಸುದೀಪ್ ಅವರು ಹೇಳಿದ್ದಾರೆ.

ಇನ್ನು ಗಿಲ್ಲಿ ಬಗ್ಗೆ ರಕ್ಷಿತಾ ಶೆಟ್ಟಿ (Rakshitha Shetty) ಅವರು ಮೊದಲಿನಿಂದಲೂ ಆಸಕ್ತಿ ಹೊಂದಿದ್ದಾರೆ. ಆ ಬಗ್ಗೆ ಜನವರಿ 4ರ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಚರ್ಚೆ ಮಾಡಿದ್ದಾರೆ. ‘ಕಾವ್ಯಾ ಯಾವಾಗಲೂ ಗಿಲ್ಲಿ ಪಕ್ಕನೇ ಕುಳಿತುಕೊಳ್ಳುತ್ತಾರೆ’ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ. ‘ಇದನ್ನೆಲ್ಲ ನೋಡಿ ಕಾವ್ಯಾ ಎಂಜಾಯ್ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ರಕ್ಷಿತಾಗಂತೂ ಸ್ವಲ್ಪ ಉರಿಯುತ್ತೆ. ಹೆಂಗಾದರೂ ಕಾವ್ಯಾನ ಹೊರಗೆ ಕಳಿಸಿದರೆ ನಾನು ಹೋಗಿ ಗಿಲ್ಲಿ ಪಕ್ಕ ಕೂರಬಹುದು ಅಂತ ಅಂದುಕೊಳ್ಳುತ್ತೀರಿ’ ಎಂದು ಕಿಚ್ಚ ಸುದೀಪ್ (Kichcha Sudeep) ಅವರು ಹೇಳಿದ್ದಾರೆ.



