ಉಡುಪಿ ಜನವರಿ 11: ನಟ ರಕ್ಷಿತ್ ಶೆಟ್ಟಿ ಸಿನೆಮಾ ಮಾಡದೇ ಹಲವು ವರ್ಷಗಳೇ ಕಳೆದಿದ್ದು, ಅವರ ಅಭಿಮಾನಿಗಳು ರಕ್ಷಿತಾ ಶೆಟ್ಟಿ ಎಲ್ಲಿ ಎಂದು ಹುಡುಕುತ್ತಿದ್ದಾರೆ. ಇದೀಗ ತುಂಬಾ ವರ್ಷಗಳ ನಂತರ ರಕ್ಷಿತ್ ಶೆಟ್ಟಿ ಉಡುಪಿ ತಾಲೂಕಿನ ಅಲೆವೂರಿನ ಕಲ್ಯಾಣ ನಗರದಲ್ಲಿ ನೇಮೋತ್ಸವ ನಡೆದಿದೆ. ಅಲೆವೂರು ದೊಡ್ಡಮನೆ ಮನೆತನದವರು ನಿರ್ವಹಿಸುವ ನೇಮೋತ್ಸವದಲ್ಲಿ ಭಾಗಿಯಾಗಿದ್ದಾರೆ. ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಈ ವಿಡಿಯೋಗಳು ವೈರಲ್ ಆಗಿವೆ.

ಈ ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವವನ್ನು ಅಲೆವೂರು ದೊಡ್ಡಮನೆ ಮನೆತನದವರು ನಿರ್ವಹಿಸುತ್ತಾರೆ. ನಟ ರಕ್ಷಿತ್ ಶೆಟ್ಟಿಯವರು ಅಲೆವೂರು ದೊಡ್ಡಮನೆ ಕುಟುಂಬದ ಕುಡಿ. ಈ ಬಾರಿಯೂ ನೇಮೋತ್ಸವದಲ್ಲಿ ಪಾಲ್ಗೊಂಡ ನಟ ರಕ್ಷಿತ್ ಶೆಟ್ಟಿಯವರು, ತಂದೆ ತಾಯಿ ಕುಟುಂಬದವರ ಜೊತೆ ರಾತ್ರಿ ನಡೆದ ನೇಮೋತ್ಸವದಲ್ಲಿ ಭಾಗಿಯಾಗಿದ್ದರು.
ರಕ್ಷಿತ್ ಶೆಟ್ಟಿಯವರು ರನ್ ಆಂಟನಿ ಚಿತ್ರದ ಕಥೆ ಬರೆದುಕೊಂಡು ಅಮೆರಿಕದಲ್ಲಿ ಕುಳಿತಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಅವರು ಊರಿನ ನೇಮೋತ್ಸವದಲ್ಲಿ ಭಾಗಿಯಾಗಿದ್ದಾರೆ.



