Connect with us

LATEST NEWS

ವೈದ್ಯರ ನಿರ್ಲಕ್ಷದಿಂದ ರಕ್ಷಾ ಸಾವಿನ ಪ್ರಕರಣ ತನಿಖೆ ಸಿಓಡಿಗೆ

ಉಡುಪಿ ಅಗಸ್ಟ್ 24:  ಬಿಜೆಪಿ ಮುಖಂಡ ಶಿವಪ್ರಸಾದ್‌ ಪತ್ನಿ ರಕ್ಷಾ ಸಂಶಯಾಶಸ್ಪದ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ ಎಂದು ಶಾಸಕ ಕೆ.ರಘುಪತಿ ಭಟ್‌ ತಿಳಿಸಿದ್ದಾರೆ. ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು  ಉಡುಪಿಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ರಕ್ಷಾ ಸಾವನ್ಬಪ್ಪಿದ ಪ್ರಕರಣದ ಬಗ್ಗೆ ಸಾಕಷ್ಟು ಗೊಂದಲವಿದೆ. ಹಾಗಾಗಿ ನಾನು ಈ ಪ್ರಕರಣವನ್ನು ಸಿ ಒಡಿಗೆ ಒಪ್ಪಿಸುವಂತೆ ಮನವಿ ಮಾಡಿದ್ದೇನೆ ಎಂದರು.

ರಕ್ಷಾ ಅವರ ಸಾವಿಗೆ ಕಾರಣವಾದ ಮಿಷನ್ ಆಸ್ಪತ್ರೆಯ ಚಿಕಿತ್ಸೆಯ ಬಗ್ಗೆ ಅನುಮಾನವಿದೆ. ಆಸ್ಪತ್ರೆಯ ವೈದ್ಯರು ತಪ್ಪೆಸಗಿರುವ ಆರೋಪಗಳು ಕೇಳಿ ಬರುತ್ತಿವೆ. ಗೃಹ ಸಚಿವರು ಈ ಬಗ್ಗೆ ಇಂದು ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಸಿಒಡಿ ತನಿಖೆಗೆ ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್ ಅವರು ಒಪ್ಪಿದ್ದಾರೆ. ಸೂಕ್ತ ರೀತಿಯ ತನಿಖೆ ಮಾಡಿ ವರದಿ ನೀಡುವಂತೆ ಗ್ರಹ ಸಚಿವ ಬೊಮ್ಮಾಯಿ ಆದೇಶ ಮಾಡಿದ್ದಾರೆ ಎಂದರು.

ಈ ಪ್ರಕರಣದ ತನಿಖೆಗೆ ಮೆಡಿಕಲ್ ಬೋರ್ಡ್ ರಚನೆಗೆ ಆದೇಶವನ್ನೂ ಮಾಡಲಾಗಿದೆ. ವೈದ್ಯಕೀಯ ರಂಗಕ್ಕೆ ಸಂಬಂದಿಸಿದ ಕೇಸು ತನಿಖೆಗೆ ಮೆಡಿಕಲ್ ಬೋರ್ಡ್ ರಚಿಸುವಂತೆ ಡಿಜಿಪಿ ಸಲಹೆ ಮಾಡಿದ್ದಾರೆ. ಈಗಾಗಲೇ ಬೊರ್ಡ್ ರಚನೆ ಮಾಡಿದ್ದು, ಐದು ದಿನದೊಳಗೆ ಈ ಬೋರ್ಡ್ ವರದಿ ನೀಡಲಿದೆ. ಮಿಷನ್ ಆಸ್ಪತ್ರೆಯ ಚಿಕಿತ್ಸೆಯ ಮೇಲೆ ಸೂಕ್ತ ತನಿಖೆ ನಡೆಯಲಿದೆ ಎಂದರು.