ಉಡುಪಿ ಸೆಪ್ಟೆಂಬರ್ 22: ಕಾಂತಾರ ಚಾಪ್ಟರ್ 1 ರ ಟ್ರೇಲರ್ ಬಿಡುಗಡೆಯಾಗಿ ಇದೀಗ ಟ್ರೆಂಡಿಂಗ್ ನಲ್ಲಿದೆ. ಈಗಾಗಲೇ 20 ಮಿಲಿಯನ್ಸ್ ಗಿಂತಲೂ ಅಧಿಕ ವೀವ್ಸ್ ನ್ನು ಟ್ರೇಲರ್ ನೋಡಿದೆ. ಕಾಂತಾರಾ ಸಿನೆಮಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದ ನಟ ರಾಕೇಶ್ ಪೂಜಾರಿ ಅವರನ್ನು ತೋರಿಸಲಾಗಿದ್ದು, ಇದೀಗ ಮತ್ತೆ ಜನರ ಮನಸ್ಸಿನಲ್ಲಿ ರಾಕೇಶ ಪೂಜಾರಿ ನೆನಪಾಗುತ್ತಿದ್ದಾನೆ.

ಕಾಂತಾರ ಚಾಪ್ಟರ್ 1 ರ ಟ್ರೇಲರ್ ರಿಲೀಸ್ ಆಗಿದೆ. ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ರಾಕೇಶ್ ಪೂಜಾರಿ ನಟಿಸಿದ್ದಾರೆ. ಅವರು ಶೂಟಿಂಗ್ ಮುಗಿಸಿ, ಮನೆಗೆ ಬಂದ ನಂತರ ಹೃದಯಾಘಾತದಿಂದ ಸಾವನಪ್ಪಿದ್ದರು. ಇದೀಗ ಕಾಂತಾರ ಚಾಪ್ಟರ್ 1 ರಲ್ಲಿ ರಾಕೇಶ್ ಪೂಜಾರಿ ಪಾತ್ರವನ್ನು ತೋರಿಸಲಾಗಿದೆ. ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಾಕೇಶ್ ಪೂಜಾರಿ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಬಗ್ಗೆ ಸಿನಿಮಾ ತಂಡದವರೇ ಮಾಹಿತಿ ನೀಡಿದ್ದರು. ಅವರ ಪಾತ್ರ ಯಾವ ರೀತಿಯಲ್ಲಿ ಇದೆ ಎಂಬುದರ ಝಲಕ್ ಟ್ರೇಲರ್ನಲ್ಲಿ ತೋರಿಸಲಾಗಿದೆ.
ಕಾಂತಾರ: ಚಾಪ್ಟರ್ 1’ ಶೂಟ್ ಪೂರ್ಣಗೊಳಿಸಿದ ಬಳಿಕ ಮದುವೆ ಒಂದಕ್ಕೆ ರಾಕೇಶ್ ತೆರಳಿದ್ದರು. ಈ ವೇಳೆ ಅವರು ಭರ್ಜರಿಯಾಗಿ ಸ್ಟೆಪ್ ಹಾಕಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಆಗಿ ನಿಧನ ಹೊಂದಿದರು.



