Connect with us

LATEST NEWS

ಸಂಸದರ ವರ್ತನೆ ಖಂಡಿಸಿ ಸತ್ಯಾಗ್ರಹಕ್ಕೆ ನಿರ್ಧರಿಸಿದ ಉಪ ಸಭಾಪತಿ

ಸಂಸದರ ವರ್ತನೆ ಖಂಡಿಸಿ ಸತ್ಯಾಗ್ರಹಕ್ಕೆ ನಿರ್ಧರಿಸಿದ ಉಪ ಸಭಾಪತಿ

ನವದೆಹಲಿ, ಸೆಪ್ಟಂಬರ್ 22:ರಾಜ್ಯಸಭೆಯಲ್ಲಿ ಗೂಂಡಾ ಪ್ರವೃತ್ತಿ ಪ್ರದರ್ಶಿಸಿದ ಸದಸ್ಯರ ವರ್ತನೆಯ ವಿರುದ್ಧ ರಾಜ್ಯ ಸಭಾ ಉಪ ಸಭಾಪತಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ತೀರ್ಮಾನಿಸಿದ್ದಾರೆ.

ರಾಜ್ಯಸಭೆಯಲ್ಲಿ ಕೇಂದ್ರ ಸರಕಾರದ ಕೃಷಿ ಮಸೂದೆಯ ಪಾಸ್ ಮಾಡುವ ಸಂದರ್ಭದಲ್ಲಿ ತೃಣಮೂಲ ಕಾಂಗ್ರೇಸ್ ನ ಡೆರಿಕ್ ಒಬ್ರಿನ್, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್ ಸೇರಿದಂತೆ 8 ರಾಜ್ಯ ಸಭಾ ಸಂಸದರು ಉಪ ಸಭಾಪತಿಯ ಬಳಿ ಬಂದು ದುರ್ವರ್ತನೆ ತೋರಿದ್ದರು.

ಅದರಲ್ಲೂ ಟಿ.ಎಂ.ಸಿ ಯ ಡೆರಿಕ್ ಒಬ್ರಿನ್ ಹಾಗೂ ಆಪ್ ನ ಸಂಜಯ್ ಸಿಂಗ್ ಒಂದು ಹಂತದಲ್ಲಿ ಉಪ ಸಭಾಪತಿಯ ಮೇಲೆ ಹಲ್ಲೆಗೂ ಯತ್ನ ನಡೆಸಿದ್ದು, ಸಭಾಪತಿ ಮೇಜಿನ ಮೇಲಿದ್ದ ಮೈಕ್ ಗಳನ್ನು ಕಿತ್ತೆಸೆದು ಹಾನಿ ಮಾಡಿದ್ದರು.

ಸಂಸದರ ಈ ದುರ್ವತನೆಯನ್ನು ತಡೆಯಲು ಬಂದ ಮಾರ್ಷಲ್ ಮೇಲೆ ಸಂಜಯ್ ಸಿಂಗ್ ಹಲ್ಲೆ ನಡೆಸಿದ್ದಲ್ಲದೆ, ಕುತ್ತಿಗೆ ಹಿಡಿದು ದಬ್ಬಿದ್ದರು.

ಈ ಎಲ್ಲಾ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದಸ್ಯರ ಈ ವರ್ತನೆಯಿಂದಾಗಿ ಈ ಸಂಸದರ ಮೇಲೆ ಕ್ರಮ ಕೈಗೊಳ್ಳುವಂತೆ ದೇಶದೆಲ್ಲೆಡೆ ಒತ್ತಾಯ ಕೇಳಿ ಬಂದಿತ್ತು.

ಈ ಹಿನ್ನಲೆಯಲ್ಲಿ ರಾಜ್ಯ ಸಭಾ ಸಭಾಪತಿ ವೆಂಕಯ್ಯ ನಾಯ್ಡು 8 ಸಂಸದರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.

ಅಮಾನತು ಆದೇಶದ ವಿರುದ್ಧ 8 ಸಂಸದರು ಸಂಸತ್ತಿನ ಮಹಾತ್ಮಾ ಗಾಂಧಿ ಪ್ರತಿಮೆಯ ಮುಂದೆ ಆಹೋರಾತ್ರಿ ಧರಣಿಯನ್ನೂ ನಡೆಸುತ್ತಿದ್ದಾರೆ.

ಈ ನಡುವೆ ಉಪ ಸಭಾಪತಿ ಹರಿವಂಶ್ ಸಿಂಗ್ ಇಂದು ಧರಣಿ ನಿರತ ಸಂಸದರಿಗೆ ಚಹಾ ವಿತರಿಸುವ ಮೂಲಕ ಮಾತುಕತೆಯನ್ನೂ ನಡೆಸಿದ್ದಾರೆ.

ಬಳಿಕದ ಬೆಳವಣಿಗೆಯಲ್ಲಿ ಈ 8 ಸಂಸದರ ವರ್ತನೆಗೆ ಬೇಸತ್ತು ಇದೀಗ ಸ್ವತಹ ಉಪ ರಾಷ್ಟ್ರಪತಿ ಹರಿವಂಶ್ ಸಿಂಗ್ ಒಂದು ದಿನದ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.

ಸದನದಲ್ಲಿ ದುರ್ವರ್ತನೆ ತೋರಿದ ಸಂಸದರಿಗೆ ವಿರೋಧ ಪಕ್ಷಗಳಾದ ಕಾಂಗ್ರೇಸ್, ಕಮ್ಯುನಿಷ್ಟ್ ಸೇರಿದಂತೆ ಎಲ್ಲಾ ಪಕ್ಷಗಳೂ ತಮ್ಮ ಬೆಂಬಲ ಸೂಚಿಸಿವೆ.

Facebook Comments

comments