LATEST NEWS
ಹದಗೆಟ್ಟ ರಾಜಾರಾಂ ಭಟ್ ಆರೋಗ್ಯ,ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿದ ಪೋಲಿಸರು
ಹದಗೆಟ್ಟ ರಾಜಾರಾಂ ಭಟ್ ಆರೋಗ್ಯ,ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿದ ಪೋಲಿಸರು
ಮಂಗಳೂರು, ಎಪ್ರಿಲ್ 08 :ಗೋಕಳ್ಳರ ಬಂಧನಕ್ಕಾಗಿ ಉಪವಾಸ ನಿರಶನ ಕುಳಿತಿದ್ದ ಟಿ.ಜಿ.ರಾಜಾರಾಂ ಭಟ್ ಅವರ ಆರೋಗ್ಯ ತೀವ್ರ ಹದಗೆಟ್ಟಿದೆ.
ಮಧ್ಯರಾತ್ರಿ ಸುಮಾರು 1 ಗಂಟೆ ಹೊತ್ತಿಗೆ ರಾಜರಾಂ ಭಟ್ ಅವರ ಆರೋಗ್ಯ ಏರುಪೇರಾಗಿದ್ದು.ಪೋಲಿಸರು ದೇರಳಕಟ್ಟೆಯ ಖಾಸಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗೋಕಳ್ಳರ ಬಂಧನಕ್ಕಾಗಿ ಕಳೆದ 9 ದಿನಗಳಿಂದ ಕೈರಂಗಳ ಅಮೃತಾ ಧಾರ ಗೋಶಾಲೆಯಲ್ಲಿ ರಾಜರಾಂ ಭಟ್ ಅವರು ನಿರಶನ ಕುಳಿತಿದ್ದರು.
ಶನಿವಾರ ಮಧ್ಯಾಹ್ನದಿಂದಲೇ ಭಟ್ ಅವರಿಗೆ ಆರೋಗ್ಯ ಕೆಟ್ಟಿದ್ದು, ಸ್ಥಳಕ್ಕೆ ಬಂದ ಆರ್ ಎಸ್ ಎಸ್ ಮುಖಂಡ ಡಾ. ಕಲ್ಲಡ್ಕ ಫ್ರಭಾಕರ್ ಭಟ್, ಎಸ್ ಸಿಡಿ ಸಿಸಿ ಬ್ಯಾಂಕ್ ಆಧ್ಯಕ್ಷ ಎಂ. ಎನ್ ರಾಜೇಂದ್ರ ಕುಮಾರ್ ಅವರು ಆಸ್ಪತ್ರೆಗೆ ದಾಖಲಾಗುವಂತೆ ರಾಜರಾಂ ಅವರ ಮನ ಒಲಿಕೆಗೆ ಪ್ರಯತ್ನಿಸಿದ್ದರು. ಆದರೆ ರಾಜರಾಂ ಭಟ್ ನಿರಾಕರಿಸದ್ದರು ಮಾತ್ರವಲ್ಲ ಅಮರಾಂತ ಉಪವಾಸ ಸತ್ಯಗ್ರಹ ಮುಂದುವರೆಸಲು ನಿರ್ಧರಿಸಿದ್ದರು.
ಆದರೆ ಮಧ್ಯ ರಾತ್ರಿ ಏಕಾಏಕಿ ಆರೋಗ್ಯ ಏರುಪೇರಾದ ಕಾರಣ ಹಿರಿಯ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಭಟ್ ಅವರ ಮನ ಒಲಿಸಿ ದೇರಳಕಟ್ಟೆಯ ಖಾಸಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಭಟ್ ಬೆಂಬಲಿಗರಿಂದ ಗೋಶಾಲೆಯಲ್ಲಿ ನಿರಶನ ಮುಂದುವರೆದಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೋಲಿಸ್ ಬಂದೋಸ್ತನ್ನು ಏರ್ಪಡಿಸಲಾಗಿದೆ.
ಪರಿಸ್ಥಿತಿ ಶಾಂತವಾಗಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
You must be logged in to post a comment Login