Connect with us

    FILM

    ಮಗಳ ದಾಂಪತ್ಯ ಸರಿ ಮಾಡಲು ಹರಸಾಹಸ ಪಡುತ್ತಿರುವ ರಜನಿಕಾಂತ್

    ಚೆನ್ನೈ: ತಮ್ಮ ಇನ್ನೊಂದು ಮಗಳ ವೈವಾಹಿಕ ಜೀವನ ಡೈವೋರ್ಸ್ ಹಂತಕ್ಕೆ ಬಂದು ನಿಂತಿರುವುದು ಹಿರಿಯ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಆಘಾತ ಉಂಟುಮಾಡಿದ್ದು, ಮಗಳು ಐಶ್ವರ್ಯ ಹಾಗೂ ಧನುಷ್ ದಾಂಪತ್ಯವನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.


    ನಟ ಧನುಷ್ ಹಾಗೂ ಐಶ್ವರ್ಯ ರಜನಿಕಾಂತ್ 18 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗೊಳಿಸುವ ಮೂಲಕ ಜನವರಿ 17ರಂದು ವಿಚ್ಛೇದನ ಘೋಷಿಸಿದ್ದಾರೆ. ಐಶ್ವರ್ಯ ಹಾಗೂ ಧನುಷ್‍ಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ. ಇದೀಗ ವಿಚ್ಛೇದನ ಘೋಷಣೆ ಬಳಿಕ ಇಬ್ಬರು ತಮ್ಮ ತಮ್ಮ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.


    ಸದ್ಯ ಧನುಷ್ ಹಾಗೂ ಐಶ್ವರ್ಯ ನಡುವಿನ ವಿಚ್ಛೇದನ ರಜನಿಕಾಂತ್ ಅವರಿಗೆ ಬೇಸರ ತರಿಸಿದ್ದು, ಅವರಿಬ್ಬರನ್ನು ಒಂದು ಮಾಡಲು ಸಕಲ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಧನುಷ್ ಹಾಗೂ ಐಶ್ವರ್ಯ ಮಾತ್ರ ರಾಜಿ ಮಾಡಿಕೊಳ್ಳುತ್ತಾರೋ ಎಂಬುವುದನ್ನು ಕಾದು ನೋಡಬೇಕಾಗಿದೆ

    Share Information
    Advertisement
    Click to comment

    You must be logged in to post a comment Login

    Leave a Reply