ಸುಬ್ರಹ್ಮಣ್ಯ ನವೆಂಬರ್ 16: ಕುಲ್ಕುಂದ ಸಮೀಪದ ಬಸವೇಶ್ವರ ದೇವಸ್ಥಾನ ಕಾರ್ತಿಕ ದೀಪೋತ್ಸವ ದಲ್ಲಿ ನಟ ರಾಜ್ ಶೆಟ್ಟಿ ಭಾಗಿಯಾಗಿದ್ದಾರೆ.

ಸುಬ್ರಹ್ಮಣ್ಯ ಸಮೀಪದ ಬಿಸಿಲೆ ಭಾಗದಲ್ಲಿ ಖ್ಯಾತ ನಟ ನಿರ್ದೇಶಕ ರಾಜ್ ಬಿ ಶೆಟ್ಟಿ ಹೊಸ ಸಿನೆಮಾದ ಶೂಟಿಂಗ್ ನಡೆಯುತ್ತಿದೆ. ಈ ಶೂಟಿಂಗ್ ಸಮಯದಲ್ಲಿ ಕಲ್ಕುಂದದಲ್ಲಿರುವ ಬಸವೇಶ್ವರ ದೇವಸ್ಥಾನ ಭೇಟಿ ನೀಡಿ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕುಲ್ಕುಂದ ಸಮೀಪದ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ನಡೆಯುತ್ತಿದ್ದು, ಈ ವೇಳೆ ತಮ್ಮ ಚಿತ್ರತಂಡದ ರಾಜ್ ಬಿ ಶೆಟ್ಟಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.



