Connect with us

LATEST NEWS

ಉಡುಪಿ – ಅಕ್ರಮ ಮರಳುಗಾರಿಕೆ ಪ್ರದೇಶದ ಮೇಲೆ ದಾಳಿ – 4 ಬೋಟ್ ವಶಕ್ಕೆ

ಉಡುಪಿ ಜೂನ್ 23: ಉಡುಪಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಪ್ರದೇಶದ ಮೇಲೆ ಗಣಿಗಾರಿಕೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ನಾಲ್ಕು ದೋಣಿಗಳನ್ನು ವಶಕ್ಕೆ ಪಡೆದಿದ್ದಾರೆ.


ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಪಡು ತೋನ್ಸೆ ಗ್ರಾಮದ ಕಂಬಳ ತೋಟ ಎಂಬಲ್ಲಿ ಹರಿಯುವ ಸ್ವರ್ಣಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುವ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಗಣಿ ಇಲಾಖಾ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಮರಳುಗಾರಿಕೆ ನಡೆಸುತ್ತಿದ್ದವರು ಪರಾರಿಯಾಗಿದ್ದಾರೆ. ಆದರೆ ನಾಲ್ಕು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ಪುಟ್ಟ ದೋಣಿಗಳನ್ನು ಮಲ್ಪೆ ಠಾಣೆಗೆ ವರ್ಗಾಯಿಸಿದ್ದು, ಬೃಹತ್ ಗಾತ್ರದ ಎರಡು ದೋಣಿಗಳನ್ನು ಕ್ರೈನ್ ಮೂಲಕ ಮೇಲಕ್ಕೆತ್ತಲಾಗಿದೆ.


ಇರ್ಷಾದ್ ಎಂಬಾತ ಇಲ್ಲಿ ಅಕ್ರಮ ಮರಳುಗಾರಿಕೆ ನಡೆಸುವ ಬಗ್ಗೆ ಈ ಹಿಂದೆಯೂ ದೂರು ಕೇಳಿಬಂದಿದ್ದು. ಒಂದು ಬಾರಿ ಇಲ್ಲಿ ಕಾರ್ಯಾಚರಣೆಯನ್ನು ನಡೆಸಿ ದೋಣಿಗಳನ್ನು ಸೀಜ್ ಮಾಡಲಾಗಿತ್ತು. ಗಣಿ ಅಧಿಕಾರಿಗಳು ದಂಡವನ್ನೂ ಹಾಕಿದ್ದರು. ಅಷ್ಟು ಮಾತ್ರವಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿಚಾರವಾಗಿಯೂ ದೂರು ದಾಖಲಿಸಿಕೊಳ್ಳಲಾಗಿತ್ತು. ಇಷ್ಟಾದರೂ ಇರ್ಷಾದ್ ಅಕ್ರಮ ಮರಳುಗಾರಿಕೆ ನಿಲ್ಲಿಸಿರಲಿಲ್ಲ. ಉತ್ತರ ಪ್ರದೇಶದ ಕಾರ್ಮಿಕರನ್ನು ಬಳಸಿ ನಿರಂತರ ಮರಳುಗಾರಿಕೆ ನಡೆಸುತ್ತಲೇ ಇದ್ದ. ಇದೀಗ ಗಣಿ ಅಧಿಕಾರಿ ಮಹೇಶ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಮಲ್ಪೆ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿದೆ.