Connect with us

LATEST NEWS

ನನಗೆ ಸಂಬಂಧವಿಲ್ಲದ ವ್ಯಕ್ತಿಗಳ ದುಷ್ಕೃತ್ಯದಲ್ಲಿ ನನ್ನ ಹೆಸರು ಸೇರಿಸಲಾಗುತ್ತಿದೆ- ರಮಾಮಾಥ ರೈ

ನನಗೆ ಸಂಬಂಧವಿಲ್ಲದ ವ್ಯಕ್ತಿಗಳ ದುಷ್ಕೃತ್ಯದಲ್ಲಿ ನನ್ನ ಹೆಸರು ಸೇರಿಸಲಾಗುತ್ತಿದೆ- ರಮಾಮಾಥ ರೈ

ಮಂಗಳೂರು ಜೂನ್ 14:- ಕಲ್ಲಡ್ಕ ಶಾಲೆಯ ಮಕ್ಕಳ ಅನ್ನ ಕಸಿದಿದ್ದಾಗಿ ನನ್ನ ಮೇಲೆ ಗೂಬೆ ಕೂರಿಸಿದ್ದವರೇ ಈಗ ಶಿಕ್ಷಣ ಇಲಾಖೆಯ ನೀಡುವ ಬಿಸಿಯೂಟಕ್ಕೆ ಕೈ ಒಡ್ಡಿದ್ದಾರೆ. ಈ ಬಗ್ಗೆ ಯಾಕೆ ಯಾರೂ ಮಾತನಾಡುತ್ತಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಪ್ರಶ್ನೆ ಮಾಡಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ , ನನ್ನನ್ನು ಸೇರಿ ಜಿಲ್ಲೆಯ ಎಲ್ಲಾ ಶಾಸಕರು ಅಭಿವೃದ್ದಿಯ ಕೆಲಸ ಮಾಡಿದ್ದಾರೆ. ಆದರೆ ಬಿಜೆಪಿ ಅಪಪ್ರಚಾರ ಮಾಡಿದರು. ಬಿಜೆಪಿಯ ಅಪಪ್ರಚಾರ ನಂಬಿದ ಮತದಾರರು ನಮ್ಮನ್ನು ಸೋಲಿಸಿದರು ಎಂದರು.

ಚುನಾವಣೆಯಲ್ಲಿ ಸೋಲಿಸಿದ ನಂತರವೂ ನನ್ನ ಮೇಲಿನ ಅಪಪ್ರಚಾರ ಮುಂದುವರೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಚಿವ ರಮಾನಾಥ ರೈ ಇತ್ತೀಚೆಗೆ ನಡೆದ ಹಲ್ಲೆ ಕಲ್ಲು ತೂರಾಟ ಪ್ರಕರಣಗಳಲ್ಲಿ ನನ್ನ ಹೆಸರನ್ನು ತಳಕು ಹಾಕಲಾಗುತ್ತಿದೆ ಎಂದರು. ರಮನಾಥ ರೈ ಯ ಬೆಂಬಲಿಗರು ಎಂದು ನನ್ನ ಹೆಸರನ್ನು ತಳಕು ಹಾಕಲಾಗುತ್ತಿದ್ದು, ನನ್ನ ಬೆಂಬಲಿಗರು ಯಾರು ಎನ್ನುವುದು ಎಲ್ಲರಿಗೂ ಗೊತ್ತು ಆದರೂ ನನಗೆ ಸಂಬಂಧವಿಲ್ಲದ ವ್ಯಕ್ತಿಗಳೂ ಮಾಡಿದ ಕೃತ್ಯಗಳಲ್ಲೂ ನನ್ನ ಹೆಸರನ್ನೂ ಸೇರಿಸಲಾಗುತ್ತಿದೆ ಎಂದು ಆರೋಪಿಸಿದರು.


ಕಲ್ಕಡ್ಕ ಶಾಲೆಯ ಮಕ್ಕಳ ಅನ್ನ ಕಸಿದಿದ್ದಾಗಿ ನನ್ನ ಬಗ್ಗೆ ಗೂಬೆ ಕೂರಿಸಿದ್ರು, ಶಿಕ್ಷಣ ಇಲಾಖೆಯಿಂದ ಬಿಸಿಯೂಟ ನೀಡುವ ವ್ಯವಸ್ಥೆ ಇದೆ ಅದಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಬಿಸಿಯೂಟ ಕೊಡ್ತೀವಿ ಅಂದ್ರೂ ಬೇಡ ಎಂದು ಚಿಕ್ಕಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸಿ ಪ್ರತಿಭಟನೆ ಮಾಡಿದ್ದರು. ಆದರೆ ಈಗ ಅವರೇ ಬಿಸಿಯೂಟ ಕೇಳಿದ್ದಾರೆ, ಇಲಾಖೆ ಕೊಡ್ತಾ ಆದರೆ ಈ ಬಗ್ಗೆಯ ಯಾರೂ ಮಾತನಾಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಬಿಜೆಪಿಯವರು ನನ್ನ ಮೇಲೆ ಮಾಡುತ್ತಿರುವ ಅಪಪ್ರಚಾರದ ಹಿನ್ನಲೆಯಲ್ಲಿ ಕಾನತ್ತೂರಿಗೆ ಹೋಗಿ ದೇವರಲ್ಲಿ ಬೇಡಿಕೊಂಡಿದ್ದೆ ಆದರೆ ಅದನ್ನೂ ಬಿಜೆಪಿಯವರು ತಮಾಷೆ ಮಾಡುತ್ತಿದ್ದಾರೆ ಎಂದು ಹೇಳಿದರು.